ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು- ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿಸಿಕೊಂಡ್ರೆ ಕೆಎಸ್ಆರ್ಟಿಸಿ ಪ್ರಮೋಷನ್…!

ಬೆಂಗಳೂರು: ಕೆಎಸ್ ಆರ್ಟಿಸಿ ತನ್ನ ನೌಕರರಿಗೆ ಪ್ರಮೋಷನ್ ಕೊಡೋದಕ್ಕೆ ಸಖತ್ ಐಡಿಯಾವೊಂದನ್ನು ಮಾಡಿದೆ. ಸಂತಾನ ಶಕ್ತಿ ಹರಣ ಚಿಕಿತ್ಸೆಗೊಳಗಾದ ನೌಕರರು ಮತ್ತು ಅವರ ಪತ್ನಿ/ಪತಿಯ ವಿವರ ನೀಡಿದ್ರೆ ವೇತನ ಬಡ್ತಿ ನೀಡೋದಾಗಿ ಆದೇಶ ಹೊರಡಿಸಿದೆ.

ಕೆಎಸ್ಆರ್ಟಿಸಿ ವಿನೂತನ ಪ್ರಯೋಗವೊಂದಕ್ಕೆ ಕೈ ಹಾಕಿದೆ. ಸಂತಾನ ಹರಣ ಚಿಕಿತ್ಸೆ ಮಾಡಿಸಿಕೊಂಡ ತನ್ನ ನೌಕರರಿಗೆ ವಿಶೇಷ ವೇತನ ಬಡ್ತಿ ನೀಡಲು ನಿರ್ಧಾರ ಮಾಡಿದೆ. ಸಂತಾನ ಶಕ್ತಿ ಹರಣ ಮಾಡಿಸಿಕೊಂಡ ನೌಕರ ಅಥವಾ ಅವರ ಪತ್ನಿ/ ಪತಿಯ ಮಾಹಿತಿ ಸಲ್ಲಿಸಿದ್ರೆ ಅಂಥಹವರಿಗೆ ವೇತನ ಬಡ್ತಿಗೆ ಅರ್ಹತೆ ನೀಡಲಿದೆ. ಈ ಯೋಜನೆಯಲ್ಲಿ ನೌಕರನ ವೇತನ ಶ್ರೇಣಿಯ ವಾರ್ಷಿಕ ಬಡ್ತಿ ವೇತನವು ಪೂರ್ತಿ ಸೇವಾವಧಿಗೆ ಅನ್ವಯವಾಗಲಿದೆ ಅಂತ ಕೆಎಸ್ಆರ್ಟಿಸಿ ಅಧಿಕೃತ ಆದೇಶ ಹೊರಡಿಸಿದೆ.

ಕೆಎಸ್ಆರ್ಟಿಸಿ ಹೊರಡಿಸಿರುವ ಸುತ್ತೋಲೆ

ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಂಡ‌‌ ದಿನದಿಂದ 2 ವರ್ಷದೊಳಗೆ ಅರ್ಜಿ ಸಲ್ಲಿಸಿ ವೇತನ ಬಡ್ತಿ ಪಡೆಯಬಹುದಾಗಿದೆ. ಇನ್ನು 2 ವರ್ಷದ ನಂತರ ಸಲ್ಲಿಸುವ ಅರ್ಜಿಗಳು ಈ ಯೋಜನೆಗೆ ಅರ್ಹವಲ್ಲ ಎಂದು ಆದೇಶದಲ್ಲಿ ಮಾಹಿತಿ ನೀಡಲಾಗಿದೆ. ಇದು ತರಬೇತಿ‌ ನೌಕರರಿಗೂ ಈ ಯೋಜನೆ ಅನ್ವಯವಾಗಲಿದೆ ಅಂತ ಕೆಎಸ್ ಆರ್ ಟಿಸಿ ಆದೇಶ ಹೊರಡಿಸಿದೆ.

ಟ್ರಾಫಿಕ್ ರೂಲ್ಸ್ ಪಾಲಿಸದಿದ್ರೆ 25ಸಾವಿರ ರೂಪಾಯಿ ದಂಡ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Kg_EUsN7KUY

About The Author