ರೈಲ್ವೇ ಇಲಾಖೆಯ ರಕ್ಷಣಾ ಪಡೆಯಲ್ಲಿ 9000ಹುದ್ದೆ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಹೆಣ್ಣುಮಕ್ಕಳಿಗೆ ಬರೋಬ್ಬರಿ ಶೇ.50ರಷ್ಟು ಮೀಸಲಾತಿ ಕಲ್ಪಿಸಿದೆ.
ರೈಲ್ವೇ ರಕ್ಷಣಾ ಪಡೆ ( ಆರ್ ಪಿಎಫ್) ನ ರಕ್ಷಣಾ ಅಧಿಕಾರಿ ಮತ್ತು ಕಾನ್ಸ್ ಟೇಬಲ್ ಗಳ ಹುದ್ದೆ ಭರ್ತಿ ಮಾಡಲು ರೈಲ್ವೇ ಇಲಾಖೆ ಅರ್ಜಿ ಆಹ್ವಾನಿಸಿದೆ. ರಕ್ಷಣಾ ಪಡೆ ವಿಭಾಗದಲ್ಲಿ ಮಹಿಳೆಯ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದು ಇದಕ್ಕಾಗಿ ಕೇಂದ್ರ ಈ ಬಾರಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದೆ. ಅಂದರೆ 9000 ಹುದ್ದೆಗಳಲ್ಲಿ 4,500 ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ ಅಂತ ಕೇಂದ್ರ ಸಚಿವ ಪಿಯೂಷ್ ಗೋಯಲ್ ಇಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸೋದು ಹೇಗೆ..?
- ರೈಲ್ವೇ ಇಲಾಖೆಯ constable.rpfonlinereg.org ವೆಬ್ ಸೈಟ್ ತೆರೆಯಿರಿ.
- ನಿಮ್ಮ ಎಡಕ್ಕೆ ಕಾಣೋ VACANCIES ಆಪ್ಶನ್ ಮೇಲೆ ಕ್ಲಿಕ್ ಮಾಡಿ.
- ಪೇಜ್ ನಲ್ಲಿ RPF Recruitment 2019ರಲ್ಲಿ ಕೇಳಲಾಗುವ ನಿಮ್ಮ ಸ್ವವಿವರಗಳನ್ನು ನಮೂದಿಸಿ
ಸೂಚನೆ: ಈ ಹುದ್ದೆ ಭರ್ತಿಯ ಕುರಿತಾಗಿ ಇದೀಗ ಪ್ರಕಟಣೆ ಹೊರಡಿಸಿದ್ದು, ಒಂದು ವೇಳೆ ಆನ್ ಲೈನ್ ನಲ್ಲಿ ಅರ್ಜಿ ಕಾಣಿಸದಿದ್ದಲ್ಲಿ. ಒಂದೆರಡು ದಿನಗಳವರೆಗೂ ಕಾಯಬೇಕಾಗುತ್ತದೆ.
ಇನ್ನು ಮುಂದೆ ಸರ್ಕಾರವೇ ತರುತ್ತಿದೆ ಹೊಸ ವಾಟ್ಸಾಪ್..!ಮಿಸ್ ಮಾಡದೇ ಈ ವಿಡಿಯೋ ನೋಡಿ