ಕೆಲವು ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಶಿಕ್ಷಣ ಮುಂದುವರಿಸಲಾಗದೇ, ಉದ್ಯೋಗಕ್ಕೆ ಹೋಗಲಾಗದೇ ಬೇಸರ ಪಡುತ್ತಾರೆ. ಯಾಕಂದ್ರೆ ಅವರಿಗೆ ಬರೀ ಹೌಸ್ ವೈಫ್ ಆಗಿ ಜೀವನ ಮಾಡೋಕ್ಕೆ ಇಷ್ಟವಿರುವುದಿಲ್ಲ. ಬದಲಾಗಿ ತಾನೂ ದುಡಿಯಬೇಕು. ನಾಲ್ಕು ಕಾಸು ಗಳಿಸಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿ ಅಂಥವರಿಗಾಗಿಯೇ ನಾವಿಂದು ಕೆಲ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕೇಕ್, ಸ್ನ್ಯಾಕ್ಸ್ ಮಾಡುವುದು. ಬರ್ತ್‌ಡೇ, ಬೇಬಿ ಶವರ್ ಸೇರಿ ಹಲವು ಪಾರ್ಟಿಗಳಿಗೆ ಕೇಕ್ ಕತ್ತರಿಸಲಾಗತ್ತೆ. ಅಲ್ಲದೇ, ಈಗಂತೂ ಸಣ್ಣ ಸಣ್ಣ ವಿಷಯಗಳಿಗೂ ಕೇಕ್ ಕತ್ತರಿಸುವ ಜನರಿದ್ದಾರೆ. ಹಾಗಾಗಿ ಕೇಕ್ ಆರ್ಡರ್ ಕೊಡುವವರು ತುಂಬಾ ಜನ ಇರುತ್ತಾರೆ. ನೀವು ನಿಮ್ಮ ಮನೆಯಲ್ಲಿ ಟೇಸ್ಟಿ ಕೇಕ್ ತಯಾರಿಸಿ, ಸೇಲ್ ಮಾಡೋಕ್ಕೆ ಶುರು ಮಾಡಿದ್ರೆ, ನಿಮಗೆ ಲಾಭವಾಗಬಹುದು. ಇದಕ್ಕೆ ನೀವು ಸೋಶಿಯಲ್ ಮೀಡಿಯಾ ಸಹಾಯ ಪಡಿಯಬಹುದು. ನಿಮ್ಮ ಸ್ನೇಹಿತರು, ಅಕ್ಕಪಕ್ಕದ ಮನೆಯವರಿಗೆ ನೀವು ಮಾಡಿದ ಕೇಕ್ ಟೇಸ್ಟ್ ಮಾಡಲು ಹೇಳಿ. ನಿಮ್ಮ ಉದ್ಯಮವನ್ನ ಪಸರಿಸಬಹುದು.
ಇದರೊಂದಿಗೆ ಸ್ನ್ಯಾಕ್ಸ್ ಕೂಡ ಮನೆಯಲ್ಲೇ ಮಾರಿ, ಪ್ಯಾಕ್ ಮಾಡಿ ಮಾರಬಹುದು. ನೀವು ನಿಮ್ಮ ಮನೆ ಕೆಲಸವನ್ನ ಬೇಗ ಬೇಗ ಮುಗಿಸಿ, ಸ್ನ್ಯಾಕ್ಸ್ ತಯಾರಿಸಿ, ಮಾರಾಟ ಮಾಡಿ. ನಿಮಗೆ ಹೆಚ್ಚೆಚ್ಚು ಲಾಭ ಬಂದ ಹಾಗೆ, ಒಂದಿಬ್ಬರನ್ನು ಕೆಲಸಕ್ಕೆ ಇರಿಸಿಕೊಳ್ಳಿ. ಎಷ್ಟೋ ಜನ ಹೀಗೆ ಮಾಡಿ, ಕೋಟಿ ಕೋಟಿ ರೂಪಾಯಿ ಸಂಪಾದಿಸಿದ್ದಾರೆ.
ಕೇಟರಿಂಗ್ ಮಾಡುವುದು. ಮನೆಯಲ್ಲೇ ಅಡುಗೆ ಮಾಡಿ, ಕೆಲಸಕ್ಕೆ ಹೋಗುವ ಜನರಿಗೆ, ಜಾಬ್ ಹೋಲ್ಡರ್ಸ್‌ಗಳಿಗೆಲ್ಲ ಲಂಚ್ ಬಾಕ್ಸ್ ನೀಡಬಹುದು. ನಗರದಲ್ಲಿ ಎಷ್ಟೋ ಜನ ಕೆಲಸ ಅರಸಿ ಬಂದಿರುತ್ತಾರೆ. ಅಂಥವರು ದಿನನಿತ್ಯ ಒಂದೊಳ್ಳೆ ಮನೆಯೂಟ ಸಿಕ್ರೆ ಸಾಕಪ್ಪ ಅಂತಿರ್ತಾರೆ. ಅಂಥವರಿಗಾಗಿ ನೀವು ಲಂಚ್ ಬಾಕ್ಸ್ ತಯಾರಿಸಿ ನೀಡಬಹುದು. ಒಂದು ಲಂಚ್ ಬಾಕ್ಸ್‌ಗೆ ಇಂತಿಷ್ಟು ಎಂದು ರೇಟ್ ಫಿಕ್ಸ್ ಮಾಡಿದರಾಯಿತು.
ಮೆಹಂದಿ ಹಾಕುವುದು. ಈಗಂತೂ ಯಾವ ಮಧುಮಗಳು ಮೆಹೆಂದಿ ಹಾಕಿಕೊಳ್ಳದೇ, ಮದುವೆ ಮಾಡಿಕೊಳ್ಳೋದೇ ಇಲ್ಲ. ಅಲ್ಲದೇ, ಚೆನ್ನಾಗಿ ಮೆಹೆಂದಿ ಹಾಕಿದ್ರೆ, ಒಬ್ಬರಿಗೆ ಸಾವಿರದಿಂದ ಎರಡು ಸಾವಿರದವರೆಗೆ ಚಾರ್ಜ್ ಮಾಡಲಾಗುತ್ತದೆ. ಹಾಗಾದ್ರೆ ನೀವು ರಿಲೆಟಿವ್ಸ್‌ಗೆಲ್ಲ ಮೆಹೆಂದಿ ಹಾಕಿದ್ರೆ, ಒಂದು ಮದುಗೇನೆ 10 ಸಾವಿರದ ತನಕ ಸಂಪಾದನೆ ಮಾಡಬಹುದು. ಆದ್ರೆ ನಿಮಗ ಚೆಂದವಾಗಿ ಮೆಹೆಂದಿ ಹಾಕುವ ವಿದ್ಯೆ ಗೊತ್ತಿರಬೇಕಷ್ಟೇ.
ಮೇಕಪ್ ಮಾಡುವುದು. ಅಥವಾ ಬ್ಯೂಟಿ ಪಾರ್ಲರ್ ಕೆಲಸ. ಬ್ಯೂಟಿಪಾರ್ಲರ್‌ಗೆ ಹೋಗದ ಹೆಣ್ಣು ಮಕ್ಕಳು ತೀರಾ ಕಡಿಮೆ ಎನ್ನಬಹುದು. ಹಾಗಾಗಿ ನೀವು ಜನಜಂಗುಳಿ ಇರುವ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ ಇಟ್ಟರೆ, ತಿಂಗಳಿಗೆ 50ರಿಂದ 1 ಸಾವಿರದವರೆಗೆ ದುಡ್ಡು ಗಳಿಸಬಹುದು. ನೀವು ಚೆನ್ನಾಗಿ ಕೆಲಸ ಮಾಡಿದ್ರೆ, ಅದು ಬಾಯಿಂದ ಬಾಯಿಗೆ ಹರಡಿ, ನಿಮ್ಮ ಪಾರ್ಲರ್‌ಗೆ ಬರುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಬಹುದು. ಅಲ್ಲದೇ, ನೀವು ಬ್ರೈಡಲ್ ಮೇಕಪ್ ಮಾಡಿದ್ರೆ, ಒಳ್ಳೆ ದುಡ್ಡನ್ನ ಸಂಪಾದನೆ ಮಾಡಬಹುದು. ನೀವು ಮಧುಮಗಳಿಗೆ ಮೇಕಪ್ ಮಾಡಿದ್ರೆ, ಮದುವೆಗೆ ಬಂದವರು ಅದನ್ನು ಮೆಚ್ಚಿ, ಅವರ ಮದುವೆಗೂ ನಿಮ್ಮನ್ನು ಮೇಕಪ್ ಮಾಡೋಕ್ಕೆ ಕರಿಯಬಹುದು. ಹಾಗಾಗಿ ನಿಮ್ಮಲ್ಲಿ ಈ ವಿದ್ಯೆ ಇದ್ರೆ, ನೀವು ಲಾಭ ಮಾಡಬಹುದು.
ಹೊಲಿಗೆ ಕೆಲಸ. ಈಗಂತೂ ಹೆಣ್ಣು ಮಕ್ಕಳು ವೆರೈಟಿ ವೆರೈಟಿ ಫ್ಯಾಷನೇಬಲ್ ಬಟ್ಟೆ ತೊಡುತ್ತಿದ್ದಾರೆ. ಒಂದಕ್ಕೊಂದು ಮೀರಿಸುವಂತೆ, ಬ್ಲೌಸ್ ಡಿಸೈನ್‌ಗಳಿದೆ. ಅಲ್ಲದೇ, ಡಿಸೈನ್ ಲೆಟೇಸ್ಟ್ ಆದಂತೆ, ಅದಕ್ಕೆ ಬೆಲೆಯೂ ದುಪ್ಪಟ್ಟಾಗುತ್ತಿದೆ. ಹಾಗಾಗಿ ಪರ್ಫೆಕ್ಟ್ ಆಗಿ ಹೊಲಿಗೆ ಕಲಿತು, ಬೋಟಿಕ್ ಇಡಬಹುದು. ಆದ್ರೆ ನೀವು ಯಾವ ಬಟ್ಟೆ ಸ್ಟಿಚ್ ಮಾಡಿದರೂನು, ಆ ಬಟ್ಟೆಗೆ ಯಾವುದೇ ಹಾನಿಯಾಗದಂತೆ ನೀಡಿಕೊಳ್ಳಬೇಕು.