ನನ್ನ ಹತ್ತಿರ ದುಡ್ಡಿದೆ ಆದ್ರೆ, ಯಾವ ಉದ್ಯಮ ಮಾಡಬೇಕು..? ಆ ಉದ್ಯಮವನ್ನು ಹೇಗೆ ಆರಂಭಿಸಬೇಕು ಅನ್ನೋದು ಗೊತ್ತಿಲ್ಲ ಅನ್ನೋದು ಒಬ್ಬರ ಸಮಸ್ಯೆ. ನನಗೆ ಕೆಲ ಉದ್ಯಮ ಮಾಡುವ ಬಗ್ಗೆ ಐಡಿಯಾ ಇದೆ, ಆದ್ರೆ ಅದಕ್ಕೆ ಮಿಷನ್ ಹೇಗೆ ಖರೀದಿ ಮಾಡಬೇಕು ಗೊತ್ತಿಲ್ಲಾ ಅನ್ನೋದು ಇನ್ನೊಬ್ಬರ ಸಮಸ್ಯೆ. ಇಂಥ ಸಮಸ್ಯೆಗಳಿಗೆ ಉತ್ತರವಾಗಿ ನಾವಿವತ್ತು, 2 ಲಕ್ಷ ಬಂಡವಾಳ ಹಾಕಿ ಯಾವ ಯಾವ ಉದ್ಯಮ ಮಾಡಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಪೇಪರ್ ಪ್ಲೇಟ್ ಉದ್ಯಮ: ಈಗಿನ ಕಾಲದಲ್ಲಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪೇಪರ್ ಪ್ಲೇಟ್ ಬಳಕೆ ಮಾಡಲಾಗುತ್ತದೆ. ಹಾಗಾಗಿ ನೀವು ಮನೆಯಲ್ಲೇ ಪೇಪರ್ ಪ್ಲೇಟ್ ತಯಾರಿಸಿ ಮಾರಾಟ ಮಾಡಬಹುದು. ಈ ಮಷಿನ ಇರಿಸಲು ದೊಡ್ಡ ರೂಮ್ ಬೇಕಾಗುತ್ತದೆ. ಒಂದೂವರೆ ಲಕ್ಷದವರೆಗೆ ಈ ಮಷಿನ್ ಬೆಲೆ ಇರುತ್ತದೆ. ಇಂಡಿಯಾ ಮಾರ್ಟ್ನಲ್ಲಿ ನಿಮಗೆ ಎಲ್ಲ ತರಹದ ಮಿಷನ್ ಸಿಗುತ್ತದೆ.
ಬಾಲ್ ಪೆನ್ ಉದ್ಯಮ: ಪ್ರತಿ ಮನೆಯಲ್ಲೂ ಬಳಸುವ ವಸ್ತು ಅಂದ್ರೆ ಪೆನ್. ಆಫೀಸಿಗೆ ಹೋಗುವವರು, ವಿದ್ಯಾರ್ಥಿಗಳು ಎಲ್ಲರೂ ಪೆನ್ ಬಳಸುವ ಕಾರಣಕ್ಕೆ, ನೀವು ಪೆನ್ ಮಾಡಿ, ಮಾರಾಟ ಮಾಡಬಹುದು. 2 ಲಕ್ಷದ ತನಕ ಪೆನ್ ತಯಾರಿ ಮಾಡುವ ಮಷಿನ್ ಸಿಗುತ್ತದೆ.
ಅಲ್ಯೂಮಿನಿಯಂ ಫೈಲ್ ಕಂಟೇನರ್ ಉದ್ಯಮ: ಇಂದು ಹೊಟೇಲ್, ಫಂಕ್ಷನ್, ಬೇಕರಿಗಳಲ್ಲಿ ಹೆಚ್ಚಾಗಿ ಬಳಸುವುದೇ, ಅಲ್ಯೂಮಿನಿಯಂ ಫೈಲ್ ಕಂಟೇನರ್. ಹಾಗಾಗಿ ನೀವು ಮಷಿನ್ ಬಳಸಿ, ಈ ಕಂಟೇನರ್ ತಯಾರಿಸಿ, ಮಾರಾಟ ಮಾಡಿದ್ರೆ, ಲಾಭ ನಿಮ್ಮ ಪಾಲು. ಎರಡು ಲಕ್ಷಕ್ಕೆ ನಿಮಗೆ ಸೆಮಿ ಅಲ್ಯೂಮಿನಿಯಂ ಫೈಲ್ ಕಂಟೇನರ್ ಮಷಿನ್ ಸಿಗುತ್ತದೆ.
ಆಲೂಗಡ್ಡೆ ಚಿಪ್ಸ್ ತಯಾರಿಕೆ: ಸ್ನ್ಯಾಕ್ಸ್ ಇಷ್ಟಪಡುವ ಎಲ್ಲರಿಗೂ ಇಷ್ಟವಾಗುವ ತಿಂಡಿ ಅಂದ್ರೆ ಆಲೂಗಡ್ಡೆ ಚಿಪ್ಸ್. ಮನೆಯಲ್ಲೇ ಮಷಿನ್ ಮೂಲಕ ನೀವು ಆಲೂಗಡ್ಡೆ ಚಿಪ್ಸ್ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ನಿಮ್ಮ ಪ್ರಾಡಕ್ಟ್ ಕ್ವಾಲಿಟಿ ಮತ್ತು ರುಚಿ ಉತ್ತಮವಾಗಿದ್ರೆ, ಗ್ರಾಹಕರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಆಲೂಗಡ್ಡೆ ಚಿಪ್ಸ್ ತಯಾರಿಸುವ ಮಷಿನ್ ಬೆಲೆ, 2 ಲಕ್ಷದ ತನಕ ಇರುತ್ತದೆ.
ಪೀನಟ್ ಬಟರ್ ತಯಾರಿಕೆ: ಇಂದಿನ ಕಾಲದಲ್ಲಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಪೀನಟ್ ಬಟರ್ ಬಳಸುತ್ತಾರೆ. ಹಾಗಾಗಿ ನೀವು ಆರೋಗ್ಯಕರ, ಉತ್ತಮ ಕ್ವಾಲಿಟಿಯ ಪೀನಟ್ ಬಟರ್ ತಯಾರಿಸಿ ಮಾರಾಟ ಮಾಡಬಹುದು. ಉತ್ತಮ ಕ್ವಾಲಿಟಿಯ ಪೀನಟ್ ಬಟರ್ ಮಷಿನ್ 80 ಸಾವಿರಕ್ಕೆ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ.