Friday, November 14, 2025

Latest Posts

ನಮ್ಮ ದೇಶದಲ್ಲಿ ಭಿಕ್ಷುಕರು, ಚಾಟ್ಸ್ ಮಾರುವವರು ಕೂಡ ಮಿಲೇನಿಯರ್ಸ್..

- Advertisement -

ನಾವೆಲ್ಲ ಜೀವನ ಮಾಡೋಕ್ಕೆ, ಹಣ ಮಾಡೋಕ್ಕೆ, ಉದ್ಯಮದ ಬಗ್ಗೆ ಐಡಿಯಾಗಳನ್ನ ಹುಡುಕ್ತಿರ್ತೀವಿ. ಕೆಲಸ ಸಿಕ್ರೆ, ಹಗಲು ರಾತ್ರಿ ಕಷ್ಟಪಟ್ಟು ದುಡಿದು, ಆದಷ್ಟು ಹಣ ಗಳಿಸಿ, ಅದನ್ನ ಉಳಿತಾಯ ಮಾಡಿ, ಶ್ರೀಮಂತರಾಗುವ ಕನಸು ಕಾಣ್ತೀವಿ. ಆದ್ರೆ ನಮ್ಮ ದೇಶದಲ್ಲಿ ಕೆಲವರು ಸಣ್ಣ ಸಣ್ಣ ಕೆಲಸ ಮಾಡಿ, ಶ್ರೀಮಂತರಾದವರಿದ್ದಾರೆ. ಕೆಲವರ ಮನೆ ಮೇಲೆ ಐಟಿ ರೇಡ್ ಕೂಡಾ ಆಗಿದೆ. ಅಂಥವರ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲಿದೆ ನೋಡಿ..

ಮುಂಬೈನಲ್ಲಿರುವ ಭಿಕ್ಷುಕರು. ಮುಂಬೈನಲ್ಲಿ ಭಿಕ್ಷೆ ಬೇಡುವ ಹಲವು ಭಿಕ್ಷುಕರು ತಮ್ಮ ಕೆಲಸ ಮುಗಿತಿದ್ದಂತೆ, ಟಿಪ್ ಟಾಪ್ ಡ್ರೆಸ್ ಮಾಡ್ಕೊಂಡು, ತಮ್ಮ ಮನೆಗೆ ಹಿಂದಿರುಗುತ್ತಾರೆ. ಇನ್ನೂ ವಿಚಿತ್ರ ಸಂಗತಿ ಅಂದ್ರೆ, ಇವರಿಗೆ ಭಿಕ್ಷೆ ಹಾಕಿದವ, ಇವರಿಗಿಂತ ಬಡವನಾಗಿರ್ತಾನೆ. ಯಾಕಂದ್ರೆ ಇವರು ಭಿಕ್ಷೆ ಬೇಡಿನೇ, ಕೋಟಿ ಕೋಟಿ ಮನೆ ಕಟ್ಟಿದ್ದಾರೆ. ಅದನ್ನ ಬಾಡಿಗೆಗೂ ಕೊಟ್ಟಿದ್ದಾರೆ. ಅಲ್ಲದೇ ಇವರಲ್ಲಿ ಕೆಲವರ ಬಳಿ, ಕೋಟಿ ಕೋಟಿ ರೂಪಾಯಿಯ ಕಾರ್‌ಗಳೂ ಇದೆ.

ಕೆಲ ವರ್ಷಗಳ ಹಿಂದೆ ಭಿಕ್ಷುಕರು ಎಷ್ಟು ದುಡ್ಡು ಮಾಡಿದ್ದಾರೆಂದು ತಿಳಿಯಲು, ಸರ್ಕಾರ ತಪಾಸಣೆ ನಡೆಸಿದಾಗ, ಭಾರತದ ಶ್ರೀಮಂತ ಭಿಕ್ಷುಕ ಭರತ್ ಜೈನ್ ಎಂದು ತಿಳಿದು ಬಂದಿದೆ. ಇವನು ಭಿಕ್ಷೆ ಬೇಡಿಯೇ ಕೋಟಿ ರೂಪಾಯಿ ಅಪಾರ್ಟ್‌ಮೆಂಟ್ ಕಟ್ಟಿ, ಅದನ್ನ ಬಾಡಿಗೆಗೆ ಕೊಟ್ಟಿದ್ದಾನೆ. ಅಲ್ಲದೇ, ಮುಂಬೈನಲ್ಲೇ ಒಂದು ಜ್ಯೂಸ್ ಸೆಂಟರ್‌ನ್ನ ಕೂಡ ಬಾಡಿಗೆಗೆ ಕೊಟ್ಟಿದ್ದಾನೆ. ಕಾರ್ ಕೂಡ ಇದೆ. ಜೊತೆಗೆ ಇವನ ಹೆಂಡತಿ ಸ್ಟೇಷನರಿ ಅಂಗಡಿ ಕೂಡ ನಡೆಸುತ್ತಾರೆ. ಇಷ್ಟೇ ಅಲ್ಲದೇ, ಲಕ್ಷ ಲಕ್ಷ ಬ್ಯಾಂಕ್‌ ಬ್ಯಾಲೆನ್ಸ್ ಹೊಂದಿದ್ದು, ಭಾರತದ ಶ್ರೀಮಂತ ಭಿಕಾರಿ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದಾನೆ.

ಕೆಲ ತಿಂಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ, ಕಚೋರಿ, ಸಮೋಸಾ, ಪಾನ್‌ವಾಲಾ, ಟೀ ಮಾರುವವರ ಮನೆ ಮೇಲೆ ದಾಳಿ ಮಾಡಲಾಯಿತು. ಇಂಥವರ ಮೇಲೆಲ್ಲಾ ದಾಳಿ ಮಾಡೋದಾ ಅಂತಾ ನೀವು ಕೇಳಬಹುದು. ಆದ್ರೆ ಇವರೆಲ್ಲರ ಅಸಲಿಯತ್ತು ಬಯಲಾಗಿದ್ದೇ ಆವಾಗ. ಆಗ ತಿಳಿದು ಬಂದಿದ್ದೇನೆಂದರೆ ಇನ್ನೂರಕ್ಕೂ ಹೆಚ್ಚು ಹಣ್ಣು, ಚಾಟ್ಸ್, ಟೀ ಮಾರುವವರು ಇದರಿಂದಲೇ ಕೋಟ್ಯಾಧಿಪತಿಗಳಾಗಿದ್ದಾರೆ ಅಂತಾ. ಬರೀ ಒಂದೆರಡು ಕೋಟಿಯಲ್ಲ, ಇನ್ನೂರು ಮುನ್ನೂರಕ್ಕೂ ಹೆಚ್ಚು ಕೋಟಿ ಆಸ್ತಿಯ ಒಡೆಯರು ಇವರೆಲ್ಲ.  ಆದ್ರೆ ಇವರೆಲ್ಲ ಟ್ಯಾಕ್ಸ್ ಕಟ್ಟದ ಕಾರಣಕ್ಕೆ, ಇವರ ಆಸ್ತಿಯನ್ನ ಜಪ್ತಿ ಮಾಡಲಾಯಿತು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss