Sunday, October 5, 2025

Latest Posts

೫೦ನೇ ದಿನದತ್ತ ಮುನ್ನುಗ್ಗಿದ ಕೆಜಿಎಫ್ ಚಾಪ್ಟರ್-೨.. ದಾಖಲೆಗಳ ಜೊತೆ ನಿಲ್ಲದ ಓಟ..!

- Advertisement -

ಕೆಜಿಎಫ್ ಎರಡು ವಾರದಲ್ಲಿ ಕಲೆಕ್ಷನ್ ಮಾಡಿ ಓಟಿಟಿಯಲ್ಲಿ ಬರೋ ಚಿತ್ರ ಅಲ್ಲ ಅನ್ನೋದು ರಿಲೀಸ್ ಆದ ದಿನದಿಂದ್ಲೇ ಪ್ರೂವ್ ಆಗ್ತಾ ಬಂತು. ಹಿಂದಿ ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡದ ಬಹುತೇಕ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದ ಪ್ರಶಾಂತ್ ನೀಲ್ ಸೃಷ್ಟಿಸಿದ ಮಾಸ್ಟರ್‌ಪೀಸ್ ೫೦ನೇ ದಿನದತ್ತ ಮುನ್ನುಗ್ಗಿರುವ ಶುಭಸುದ್ದಿಯನ್ನು ಸ್ವತಃ ಹೊಂಬಾಳೆ ಫಿಲ್ಮ್÷್ಸ ಸಂಭ್ರಮದಿAದ ಹಂಚಿಕೊAಡಿದೆ. ಈ ಸಂಭ್ರಮವನ್ನು ಜಗತ್ತಿನ ೩೯೦ ಸಿಟಿಗಳು ಇನ್ನೂ ಆಚರಿಸುತ್ತಿವೆ ಅಂತ ಚಿತ್ರತಂಡ ಹೇಳಿದೆ.
ನಮ್ಮ ದೇಶದಲ್ಲೇ ೨೮೦ಕ್ಕೂ ಹೆಚ್ಚು ಸೆಂಟರ್‌ಗಳಲ್ಲಿ ಚಿತ್ರ ಪ್ರದರ್ಶನ ಯಶಸ್ವಿಯಾಗಿ ನಡೀತಿದೆ. ಪ್ರತಿದಿನ ೨-೩ ಕೋಟಿ ಕಲೆಕ್ಷನ್ ಗಳಿಸ್ತಿರೋ ಕೆಜಿಎಫ್ ವೀಕೆಂಡ್ನಲ್ಲಿ ೫-೬ ಕೋಟಿಯನ್ನು ಈಗಲೂ ಬಾಚಿಕೊಳ್ತಿದೆ. ಭಾರತವನ್ನು ಹೊರತುಪಡಿಸಿ ವಿಶ್ವದ ೧೦ ನಗರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗ್ತಿರೋ ಕೆಜಿಎಫ್ ಮಲೇಷ್ಯಾದಲ್ಲಿ ೧೭ ಕೋಟಿಗೂ ಹೆಚ್ಚು ಗಳಿಸಿದ್ದು ಇನ್ನೂ ೨ ಸೆಂಟರ್‌ಗಳಲ್ಲಿ ಪ್ರದರ್ಶನ ಕಾಣ್ತಿದೆ ಅನ್ನೋ ಸುದ್ದಿಯನ್ನ ನಾವೇ ನಿಮಗೆ ಕೊಟ್ಟಿದ್ವಿ. ಇಲ್ಲಿ ಅಚ್ಛರಿಯ ವಿಷ್ಯ ಏನಂದ್ರೆ, ಯಾವುದೇ ಸಿನಿಮಾಗಳು ಈಗಿನ ದಿನಗಳಲ್ಲಿ ೨ ವಾರದಲ್ಲಿ ಕೋಟಿ ಕೋಟಿ ಬಾಚಿಕೊಂಡು ಒಂದು ತಿಂಗಳೊಳಗೆ ಓಟಿಟಿ ಮೂಲಕ ನಂತರ ಟಿವಿಗಳ ಮೂಲಕ ಮನೆಗೆ ಬಂದುಬಿಡುತ್ತೆ ಆದ್ರೆ ಕೆಜಿಎಫ್ ಮಾತ್ರ ೫೦ ದಿನ ೧೦೦ ದಿನ ಅನ್ನೋ ಹಳೇ ಶೈಲಿಯ ವಿಜಯಯಾತ್ರೆ ನಡೆಸ್ತಾ ಇರೋದು ಇಂಟರೆಷ್ಟಿAಗ್ ಅಲ್ವಾ. ಕಲೆಕ್ಷನ್ ವಿಚಾರದಲ್ಲೂ ಕೆಜಿಎಫ್ ಬಾಹುಬಲಿ ೨ ಹತ್ತಿರ ರ‍್ತಾ ಇದ್ದು, ಬಾಹುಬಲಿಯನ್ನು ಮೀರಿಸೋದು ಕಷ್ಟ, ಆದರೂ ೧೦೦ ಕೋಟಿ ಬಜೆಟ್‌ನ ಕೆಜಿಎಫ್ ಮಾಡ್ತಿರೋ ೧೫೦೦ ಕೋಟಿ ಕಲೆಕ್ಷನ್ ಜಗತ್ತಿನ ದೊಡ್ಡ ದೊಡ್ಡ ಸಿನಿಮಾ ಮೇಕರ್‌ಗಳನ್ನೂ ಅಚ್ಛರಿಗೆ ತಳ್ಳಿದೆ.
ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಹೀಗೆ ಕೋಟಿ ಕೋಟಿ ಕೊಳ್ಳೆ ಹೊಡೀಲಿ. ಕನ್ನಡದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹರಡಲಿ. ನೂರು ದಿನ ನೂರಾರು ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣಲಿ ಅನ್ನೋದು ನಮ್ಮ ಬೆಸ್ಟ್ ವಿಶಸ್ ಕೂಡ.

- Advertisement -

Latest Posts

Don't Miss