Sunday, December 22, 2024

Latest Posts

ಡಬಲ್ ಮೀನಿಂಗ್ ಪರ್ಫ್ಯೂಮ್ ಆ್ಯಡ್ ವಿರುದ್ಧ ನೆಟ್ಟಿಗರ ಆಕ್ರೋಶ..

- Advertisement -

ಕೆಲವೊಂದು ಜಾಹೀರಾತು ಸಮಾಜದ ಸ್ವಾಸ್ಥ್ಯ ಕಾಪಾಡಿದರೆ, ಇನ್ನು ಕೆಲವು ಜಾಹೀರಾತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಅಂಥದ್ದೇ ಒಂದು ಜಾಹೀರಾತು ಬಂದಿದ್ದು, ಇಂಥ ಜಾಹೀರಾತು ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. Layer Shot ಅನ್ನೋ ಪರ್ಫ್ಯೂಮ್ ಜಾಹೀರಾತಿನಲ್ಲಿ, ಹೆಣ್ಣಿಗೆ ಅವಮಾನ ಮಾಡಿದ ರೀತಿಯಲ್ಲಿ ಸೀನ್ ತೋರಿಸಲಾಗಿದ್ದು, ಈ ರೀತಿ ಸೀನ್ ಇರುವ, ಮಾತಿರುವ ಡಬಲ್ ಮೀನಿಂಗ್ ಜಾಹೀರಾತು ಬ್ಯಾನ್ ಮಾಡಬೇಕು ಎಂದು ಟ್ವೀಟರ್‌ನಲ್ಲಿ ಅಭಿಯಾನ ಶುರುವಾಗಿದೆ.

ಇದರಲ್ಲಿ ಎರಡು ಜಾಹೀರಾತಿದ್ದು, ಒಂದು ಜಾಹೀರಾತಿನಲ್ಲಿ ಒಂದು ಮಾಲ್‌ನಲ್ಲಿ ನಾಲ್ಕು ಹುಡುಗರು ಮತ್ತು ಒಂದು ಹುಡುಗಿ ಶಾಪಿಂಗ್ ಬಂದಿರ್ತಾರೆ. ಆ ಆ ನಾಲ್ವರಲ್ಲಿ ಒಬ್ಬವನು, ನಾವು ನಾಲ್ವರು ಇವಳೊಬ್ಬಳೇ ಎಂದು ಹೇಳುತ್ತಾನೆ. ಆದಾದ ಬಳಿ ಅಲ್ಲಿ ಡಬಲ್ ಮೀನಿಂಗ್ ಮಾತು ಬರುತ್ತದೆ. ಈ ಬಗ್ಗೆ ಟ್ವೀಟ್ ಮಾಡಿರುವ  ರಿಷಿತಾ ಎಂಬುವವರು, ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಜಾಹೀರಾತುಗಳು ಹೇಗೆ ಅನುಮೋದನೆ ಪಡೆಯುತ್ತದೆ..? ಇದು ಅಸಹ್ಯಕರವಾಗಿರುವ ಎರಡನೇಯ ಜಾಹೀರಾತಿಗೆ ಎಂದು ಹೇಳಿದ್ದಾರೆ.

ಯಾಕಂದ್ರೆ ಇದೇ ಪರ್ಫ್ಯೂಮ್‌ನ ಇನ್ನೊಂದು ಜಾಹೀರಾತಿದೆ. ಅದರಲ್ಲೂ ಡಬಲ್ ಮೀನಿಂಗ್ ಮಾತನಾಡಲಾಗಿದೆ. ಈ ಬಗ್ಗೆಯೂ ಕೆಲವರು ಕಾಮೆಂಟ್ ಮಾಡಿದ್ದು, ಇದನ್ನ ಬರೆದು, ಪ್ರೋಡ್ಯೂಸ್ ಮಾಡಿ, ಇದರಲ್ಲಿ ನಟಿಸಿದವರು ಎಂಥ ಮೂರ್ಖರು..? ಒಬ್ಬೊಬ್ಬರ ಮೇಲೂ ಅಸಹ್ಯ ಹುಟ್ಟುತ್ತಿದೆ ಎಂದು ಬರೆದಿದ್ದಾರೆ. ಟ್ವೀಟ್ ಮಾಡಿರುವ ವೀಡಿಯೋಗಳು ಇಂತಿವೆ ನೋಡಿ..

- Advertisement -

Latest Posts

Don't Miss