ಸಿದ್ದು ಮೊಸೆವಾಲ ಹತ್ಯೆನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾಗೂ ತಂದೆ ಸಲೀಮ್ ಗೆ, ಅನಾಮಧೇಯ ಜೀವ ಬೆದರಿಕೆಯ ಪತ್ರಬಂದಿದೆ.
ಸಲ್ಮಾನ್ ಖಾನ್ ತಂದೆ ಬೆಳಗ್ಗೆ ವಾಕಿಂಗ್ ಮಾಡುವ ಸಮಯದಲ್ಲಿ ಕುಳಿತುಕೊಳ್ಳುವ ಸ್ಥಳದಲ್ಲಿ ಬೆದರಿಕೆಯ ಪತ್ರಯೊಂದು ಸಿಕ್ಕಿದೆ. ಕೂಡಲೇ ಭದ್ರತಾ ಸಿಬ್ಬಂದಿ ಪತ್ರವನ್ನು ಪರಿಶೀಲನೆ ನಡೆಸಿದ್ದಾರೆ. ಬೆದರಿಕೆ ಪತ್ರನೋಡಿದಾಗ ಶಾಕ್ ಎದುರಾಗಿತ್ತು, ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾಗೂ ತಂದೆ ಸಲೀಮ್ ಖಾನ್ ಗೆ ಬೆದರಿಕೆ ಹಾಕಲಾಗಿತ್ತು.
ಜೀವ ಬೆದರಿಕೆ ಹಾಕಿರುವ ಪಾತ್ರವನ್ನು ಯಾರು ಬರೆದಿದ್ದು ಎಂಬುದು ಇನ್ನೂ ತಿಳಿದು ಬಂದಿಲ್ಲ, ಮೂಸೆವಾಲ ರೀತಿಯಲ್ಲಿ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಅನಾಮಧೇಯ ಪತ್ರದಲ್ಲಿ ಬರೆಯಲಾಗಿದೆ.
ಬೆದರಿಕೆ ಪತ್ರದಲ್ಲಿ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ರನ್ನು ಹತ್ಯೆ ಮಾಡುತ್ತೇವೆ ಎಂದು ಬರೆದಿದ್ದು, ಸಂಚಲನಕ್ಕೆ ಕಾರಣ ವಾಗಿದೆ. ಪತ್ರದಲ್ಲಿ ಆತಂಕಕಾರಿ ಅಂಶಗಳು ಇರೋದು ಬೆಳಕಿಗೆ ಬರುತ್ತಿದಂತೆ, ಸಲ್ಮಾನ್ ಖಾನ್ ಕುಟುಂಬದ ಭದ್ರತಾ ಸಿಬ್ಬಂದಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲವು ಆಯಾಮಗಳಲ್ಲಿ ತನಿಖೆ ಶರುವಾಗಿದೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.