ಆಮ್ಸ್‍ತ್ಲಿವಿನ್: ಪುರುಷರ ಇಂಗ್ಲೆಂಡ್ ಕ್ರಿಕೆಟ್ ತಂಡ ಏಕದಿನ ದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ವಿಶ್ವ ದಾಖಲೆ ಬರೆದಿದೆ.
ಇಲ್ಲಿನ ವಿಆರ್‍ಎ ಮೈದಾನದಲ್ಲಿ ನೆದರ್‍ಲ್ಯಾಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ 50 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 498 ರನ್ ಗಳಿಸಿತು. ಇದರೊಂದಿಗೆ ತನ್ನ ತಾನೆ ಮುರಿಯಿತು. 2018ರಲ್ಲಿ ಇಂಗ್ಲೆಂಡ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 481/6 ರನ್ ಗಳಿಸಿ ಅಂದು ದಾಖಲೆ ಬರೆದಿತ್ತುಘಿ.
ನೆದರ್‍ಲ್ಯಾಂಡ್ ವಿರುದ್ಧ ಹೊಸ ಮೈಲುಗಲ್ಲು ಮುಟ್ಟಲು ಕಾರಣವಾಗಿದ್ದು ಫಿಲ್ ಸಾಲ್ಟ್ (122 ರನ್), ದಾವಿದ್ ಮಲಾನ್ (125 ರನ್), ಜೋಸ್ ಬಟ್ಲರ್ ಅಜೇಯ 162 ರನ್ ಸಿಡಿಸಿದರು.
ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ 7 ಬೌಂಡರಿ 14 ಸಿಕ್ಸರ್‍ಗಳೊಂದಿಗೆ 162 ರನ್ ಚಚ್ಚಿದರು.ದಾವಿದ್ ಮಲಾನ್ 109 ಎಸೆತದಲ್ಲಿ 125 ರನ್, ಸಾಲ್ಟ್ 93 ಎಸೆತದಲ್ಲಿ 122 ರನ್ ಪೇರಿಸಿದರು.
ಇನ್ನುಳಿದಂತೆ ಲಿಯಾಮ್ ಲಿವಿಂಗ್ ಸ್ಟೋನ್ ಅಜೇಯ 66 ರನ್, ಜಸನ್ ರಾಯ್ 1 ರನ್ ಗಳಿಸಿದರು.