ಕರ್ನಾಟಕ ಟಿವಿ ಜೊತೆ ಮಾತನಾಡಿದ ರ್ಯಾಪರ್ ಅಲೋಕ್, ಬರೀ ತಮ್ಮ ಸಂಗೀತ ಜರ್ನಿ ಬಗ್ಗೆ ಅಷ್ಟೇ ಅಲ್ಲ. ಬದಲಾಗಿ ಇಂಗ್ಲೀಷ್ ಮೀಡಿಯಂನಲ್ಲಿ ಓದಿದರೂ ಕೂಡ, ಕನ್ನಡದ ಹಾಡನ್ನ ಅಷ್ಟು ಅಚ್ಚುಕಟ್ಟಾಗಿ ಹೇಗೆ ಹಾಡ್ತಾರೆ. ಅದಕ್ಕೆ ಕಾರಣವೇನು ಅನ್ನೋ ಬಗ್ಗೆಯೂ ಮಾತನಾಡಿದ್ದಾರೆ.
ಅಲೋಕ್ ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಕೂಡ, ಅವರು ಹಾಡುವ ಕನ್ನಡ ಹಾಡು ಅಚ್ಚುಕಟ್ಟಾಗಿರುತ್ತೆ. ಇದಕ್ಕೆ ಕಾರಣ ಅವರಿಗಿರುವ ಕನ್ನಡ ಪ್ರೀತಿ. ಅಲೋಕ್ ಕನ್ನಡ ಕ್ಲಾಸ್‌ನಾ ಯಾವತ್ತೂ ಬಂಕ್ ಮಾಡ್ತಿರ್ಲಿಲ್ವಂತೆ. ಯಾಕಂದ್ರೆ ಅವರಿಗೆ ಕನ್ನಡ ಇಷ್ಟವಾಗುವುದರ ಜೊತೆಗೆ, ಕನ್ನಡ ಮೇಷ್ಟ್ರು ಕೂಡ ಇಷ್ಟವಾಗಿದ್ರು. ಅವರೆಲ್ಲ ಇವರೊಂದಿಗೆ ಗೆಳೆಯರಂತಿದ್ದ ಕಾರಣ, ಕನ್ನಡ ಮೇಷ್ಟ್ರ ಪಾಠ ಕೇಳೋದು ಅಲೋಕ್‌ಗೆ ಇಷ್ಟವಾಗ್ತಿತ್ತು.
ಇನ್ನು ಕನ್ನಡ ಹಾಡುಗಳನ್ನ ಹೈ ಲೆವಲ್‌ಗೆ ತೆಗೆದುಕೊಂಡು ಹೋಗುವ ಬಗ್ಗೆ ಮಾತನಾಡುವ ಅಲೋಕ್, ನಾವು ಅರ್ಥವಾಗದಿದ್ರೂ, ಇಂಗ್ಲೀಷ್ ಸೇರಿ ಬೇರೆ ಭಾಷಗಳ ಹಾಡನ್ನ ಕೇಳ್ತೀವಿ. ಆ ಹಾಡಲ್ಲಿ ಅವ್ರು ಹೊಗಳಿದ್ದಾರೋ, ಬೈದಿದ್ದಾರೋ ಅನ್ನೋದು ನೋಡದೇ, ಮ್ಯೂಸಿಕ್‌ನ ಇಷ್ಟಪಡ್ತೀವಿ. ಇದು ಕನ್ನಡದಲ್ಲೂ ಯಾಕಾಗ್ಬಾರ್ದು..? ನಾವು ದಾಸರ ಪದಗಳನ್ನ ಉತ್ತಮವಾಗಿ ಹಾಡಿ, ಜನರಿಗೆ ತಲುಪಿಸಿದ್ರೆ, ಜನ ಅದನ್ನ ಖಂಡಿತ ಇಷ್ಟಪಟ್ಟೇ ಪಡ್ತಾರೆ. ಯಾಕಂದ್ರೆ ಅದರಲ್ಲಿ ಅರ್ಥವಿದೆ. ಜೀವನ ಸಾರವಿದೆ. ಹಾಗಾಗಿ ಜನರು ಇಷ್ಟಪಡುವ ರೀತಿ, ನಾವು ಹಾಡನ್ನ ಕ್ರಿಯೇಟ್ ಮಾಡ್ಬೇಕು ಅಂತಾರೆ ಅಲೋಕ್.
ಇನ್ನು ಇಷ್ಟು ಫೇಮಸ್ ಆಗಿರುವ ಅಲೋಕ್‌ರನ್ನ ಅವರ ಕಾಲೇಜಿನಲ್ಲಿ ಗೆಸ್ಟ್ ಆಗಿ ಕರ್ದಿದ್ರಂತೆ. ಆಗ ನಾನು ಲಾಸ್ಟ್ ಬೆಂಚ್ ಸ್ಟುಡೆಂಟ್ ಅಂತಾ ಅಲೋಕ್ ಹೆಮ್ಮೆಯಿಂದ ಹೇಳಿಕೊಂಡರಂತೆ. ನಾವು ಬಂದ ದಾರಿಯನ್ನು ಮರಿಬಾರ್ದು ಅಂತಾ ಹೇಳುವ ಅಲೋಕ್, ಲಾಸ್ಟ್ ಬೆಂಚ್ ಸ್ಟುಡೆಂಟ್‌ಗಳನ್ನ ಬ್ಯಾಡ್ ಸ್ಟುಡೆಂಟ್ ಅಂತಾ ಹೇಳೋದು ತಪ್ಪು ಅಂತಾ ಹೇಳ್ತಾರೆ.