Saturday, July 12, 2025

Latest Posts

ಚೆಸ್ ಒಲಿಂಪಿಯಡ್ ಟೂರ್ನಿ : ಟಾರ್ಚ್ ರಿಲೆಗೆ ಪ್ರಧಾನಿ ಮೋದಿ ಚಾಲನೆ 

- Advertisement -

ಹೊಸದಿಲ್ಲಿ: ಚೊಚ್ಚಲ ಚೆಸ್ ಒಲಿಂಪಿಯಡ್ ಚೆಸ್ ಟೂರ್ನಿಯ ಟಾರ್ಚ್ ರಿಲೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಇದೇ ಮೊದಲ ಬಾರಿಗೆ ಟಾರ್ಚ್ ರಿಲೆಯನ್ನು ಅಳವಡಿಸಿದೆ. ಫೀಡೆ ಅಧ್ಯಕ್ಷ  ಆರ್ಕಾಡಿ ಡೊವೊಕೊವಿಚ್ ಪಂಜಿನ ಬೆಳಕನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಚೆಸ್ ದಂತಕತೆ ವಿಶ್ವನಾಥನ್ ಆನಂದ್‍ಗೆ ನೀಡಿದರು.

ನಂತರ ಮಾತನಾಡಿದ ಪ್ರಧಾನಿ ಮೋದಿ,ಚೆಸ್ ಬರೀ ಕ್ರೀಡೆಯಲ್ಲ, ಶಿಕ್ಷಣದ ಅಸ್ತ್ರ.

ಪಂಜಿನೆ ರಿಲೆ ಭಾರತದಿಂದ ಆರಂಭಿಸಲು ಫಿಡೆ ಫೆಡರೇಶನ್ ನಿರ್ಧರಿಸಿತು. ಇದು ಬರೀ ಭಾರತಕ್ಕೆ ಮಾತ್ರ ಗೌರವವಲ್ಲ. ಚೆಸ್‍ಗೂ ಗೌರವ ಎಂದು ಪ್ರಧಾನಿ ಮೋದಿ ಹೇಳಿದರು.ಕ್ರೀಡಾ ಸಚಿವ ಅನುರಾಗ್ ಠಾಕೂರ್ ಉಪಸ್ಥಿತರಿದ್ದರು.

ಪಂಚಿನ ಬೆಳಕು 40 ದಿನಗಳಲ್ಲಿ 75 ನಗರಗಳಿಗೆ ತೆರಳಲಿದ್ದು ನಂತರ ಚೆನ್ನೈನ ಮಹಾಬಲಿಪುರಂಗೆ ಆಗಮಿಸಲಿದೆ. ಲೆಹ,ಶ್ರೀನಗರ, ಜೈಪುರ,ಸೂರತ್, ಮುಂಬೈ, ಭೋಪಾಲ್, ಪಾಟ್ನ, ಕೋಲ್ಕತ್ತಾ, ಗಾಂಗ್‍ಟೊಕ, ಹೈದ್ರಾಬಾದ್, ಬೆಂಗಳೂರು, ತ್ರಿಶೂರ್, ಫೋರ್ಟ್ ಬ್ಲೇರ್, ಮತ್ತು ಕನ್ಯಕುಮಾರಿಗೆ ಬರಲಿದೆ.

 

 

 

- Advertisement -

Latest Posts

Don't Miss