ಡಬ್ಲಿನ್: ಯಜ್ವಿಂದರ್ ಚಾಹಲ್ ಅವರ ಅಮೋಘ ಬೌಲಿಂಗ್ ಪ್ರದರ್ಶನ್ ನೆರೆವಿನಿಂದ ಟೀಮ್ ಇಂಡಿಯಾ ಆತಿಥೇಯ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಮಳೆಯ ಕಣ್ಣಾಮುಚ್ಚಾಲೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮಳೆಯ ಕಾರಣ ಪಂದ್ಯವನ್ನು 12 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು.
ಐರ್ಲೆಂಡ್ ಪರ ಪೌಲ್ ಸ್ಟಿರ್ಲಿಂಗ್ 4, ಗಾರೆತ್ ಡಿಲಾನಿ 8, ಹ್ಯಾರಿ ಟೆಕ್ಟರ್ 64,ಟಕ್ಕರ್ 18,ಡಾಕ್ರೆಲ್ ಅಜೇಯ 4 ರನ್ ಗಳಿಸಿದರು. ಭಾರತ ಪರ ಯಜ್ವಿಂದರ್ ಚಾಹಲ್,ಹಾರ್ದಿಕ್ ಪಾಂಡ್ಯ,ಆವೇಶ್ ಖಾನ್ ತಲಾ 1 ವಿಕೆಟ್ ಪಡೆದರು.
109 ರನ್ ಗುರಿ ಬೆನ್ನತ್ತಿದ ಭಾರತ ಪರ ದೀಪಕ್ ಹೂಡಾ 47,ಇಶಾನ್ ಕಿಶನ್ 26, ಸೂರ್ಯ ಕುಮಾರ್ 0, ಹಾರ್ದಿಕ್ ಪಾಂಡ್ಯ 24, ದಿನೇಶ್ ಕಾರ್ತಿಕ್ ಅಜೇಯ5 ರನ್ ಗಳಿಸಿದರು.
ಭಾರತ 9.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿತು. ಇನ್ನು 16 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.ಈ ಗೆಲುವಿನೊಂದಿಗೆ ಭಾರತ 1-0 ಸರಣಿ ಮುನ್ನಡೆ ಪಡೆಯಿತು. ಯಜ್ವಿಂದರ್ ಚಾಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.