ಜಸ್ಪ್ರೀತ್ ಬುಮ್ರಾಗೆ ನಾಯಕ ಪಟ್ಟ ? ನಾಯಕ ರೋಹಿತ್ ಶರ್ಮಾಗೆ ಕೊರೋನಾ

ಲಂಡನ್ : ಭಾರತ ಕ್ರಿಕೆಟ್ ತಂಡದ ಯಾರ್ಕರ್ ಕಿಂಗ್ ಖ್ಯಾತಿಯ ಜಸ್ಪ್ರೀತ್ ಬುಮ್ರಾ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ  ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ನಾಯಕಿ ರೋಹಿತ್ ಶರ್ಮಾ ಕೊರೋನಾ ಸೋಂಕಿಗೆ ಗುರಿಯಾಗಿ ಐಸೋಲೇಶನ್‍ನಲ್ಲಿ ಇದ್ದಾರೆ. ಉಪನಾಯಕ ಕೆ.ಎಲ್.ರಾಹುಲ್ ಗಾಯದಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇರುವುರಿಂದ ವೇಗಿ ಬುಮ್ರಾ ತಂಡದ ನಾಯಕತ್ವವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಬುಮ್ರಾ ಅವರಿಗೆ ಉಪನಾಯಕನಾಗಿ ಭಡ್ತಿ ನೀಡಲಾಗಿತ್ತು. ನಾಯಕತ್ವ ವಹಿಸುವ ಕುರಿತು  ಸ್ವತಃ ಬುಮ್ರಾ, ಅವಕಾಶ ಕೊಟ್ಟರೆ ಅದು ಗೌರವ. ಯಾವ ಆಟಗಾರರು ಇದನ್ನು ವಿರೋಸುವುದಿಲ್ಲ ಎಂಬುದು ನನ್ನ ನಂಬಿಕೆ. ಇದಕ್ಕಿಂತ ದೊಡ್ಡ  ಅನು`Àವ ಮತ್ತೊಂದಿಲ್ಲ ಎಂದು ಅಂದು ಬುಮ್ರಾ ಹೇಳಿದ್ದರು.  ಇದೀಗ  ಬುಮ್ರಾ ಅವರಿಗೆ ನಾಯಕತ್ವ ಒಲಿದು ಬಂದಿದೆ.

ನಾಯಕ ರೋಹಿತ್ ಶರ್ಮಾಗೆ ಕೊರೋನಾ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ಸೋಂಕಿಗೆ ಗುರಿಯಾಗಿದ್ದು ಆಘಾತ ನೀಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದು ಮತ್ತು ತನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಶನಿವಾರ ನಡೆಸಿದ ರಾಪಿಡ್ ಟೆಸ್ಟ್ ನಂತರ ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ. ಪಾಸಿಟಿವ್ Àಲಿತಾಂಶ ಬಂದಿದ್ದರಿಂದ ಹೋಟೇಲ್ ನಲ್ಲಿ ಐಸೋಲೇಶನ್ ಆಗಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೈಕೆಯಲ್ಲಿದೆ ಎಂದು ಪೋಸ್ಟ್ ಮಾಡಿದೆ.

35 ವರ್ಷ ಬಳಿಕ ವೇಗಿಗೆ ನಾಯಕನ ಪಟ್ಟ ?

ಅಚ್ಚರಿ ಎಂಬಂತೆ ಭಾರತ ಕ್ರಿಕೆಟ್ ತಂಡವನ್ನು ವೇಗಿ ಮುನ್ನಡೆಸುವ ಸಾಧ್ಯತೆ ಇದೆ.  1987 ಮಾರ್ಚ್‍ನಲ್ಲಿ ಭಾರತ ಕ್ರಿಕೆಟ್ ದಂತೆಕತೆ ಕಪಿಲ್ ದೇವ್ ನಂತರ ಯಾವ ವೇಗಿಯೂ ತಂಡವನ್ನು ಮುನ್ನಡೆಸಿರಲಿಲ್ಲ. ಇದೀಗ 35 ವರ್ಷದ ಬಳಿಕ ಜಸ್ಪ್ರೀತ್ ಬುಮ್ರಾ ಅಕೃತವಾಗಿ ತಂಡವನ್ನು ಮುನ್ನಡೆಸುವ ಅವಕಾಶ ಸಿಗಬಹುದಾಗಿದೆ.

ರೋಹಿತ್  ಅನುಪಸ್ಥಿತಿಯಲ್ಲಿ ಯಾರಿಗೆ ಚಾನ್ಸ್ ?

ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ  ಅವರ ಸ್ಥಾನದಲ್ಲಿ ಆಲ್ರೌಂಡರ್ ಹನುಮ ವಿಹಾರಿ ಅಥವಾ ಕೆ.ಎಸ್.ಭರತ್ ಸ್ಥಾನ ತುಂಬುವ ಸಾಧ್ಯತೆ ಇದೆ.  ಈ ಹಿಂದೆ ಎಂಸಿಜೆ ಮೈದಾನದಲ್ಲಿ  ಆಲ್ರೌಂಡರ್ ಹನುಮ ವಿಹಾರಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಅನುಭವದ ಆಧಾರದ ಮೇಲೆ ಹನುಮ ವಿಹಾರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.  ಇನ್ನು ಫಾರ್ಮ್ ಗಮನದಲ್ಲಿಟ್ಟು ಆಯ್ಕೆ ಮಾಡುವುದಾದರೆ ಕೆ.ಎಸ್.`ಭರತ್‍ಗೆ ಅವಕಾಶ ಸಿಗಬಹುದಾಗಿದೆ.

 

About The Author