ವಿಂಬಲ್ಡನ್: ಸೆಮಿಗೆ ಲಗ್ಗೆ ಹಾಕಿದ ನವೊಕ್ ಜೊಕೊವಿಕ್

ವಿಂಬಲ್ಡನ್:ಅಗ್ರ  ಆಟಗಾರ ನವೊಕ್ ಜೊಕೊವಿಕ್ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಜಾನಿಕ್ ಸಿನ್ನರ್ ವಿರುದ್ಧ  5-7, 2-6, 6-3,6-3,6-2 ಅಂಕಗಳಿಂದ ಗೆದ್ದರು. ಇದರೊಂದಿಗೆ ಜೊಕೊವಿಕ್ ವಿಂಬಲ್ಡನ್ ಟೂರ್ನಿಯಲ್ಲಿ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿದರು.

ಇದುವರೆಗೂ ಒಟ್ಟು ಗ್ರ್ಯಾನ್ ಸ್ಲಾಮ್ ಗಳಲ್ಲಿ 43 ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಜೊತೆಗೆ ವಿಂಬಲ್ಡನ್ ನಲ್ಲಿ ಸತತ 26ನೇ ಗೆಲುವಾಗಿದೆ. ನಾಲ್ಕನೆ ಬಾರಿ ವಿಂಬಲ್ಡನ್ ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

3 ಗಂಟೆ 35 ನಿಮಿಷಗಳ ಕಾಲ ಹೋರಾಡಿದ ಜೋಕೊವಿಕ್ ಮೊದಲ ಎರಡು ಸೆಟ್ ಗಳಲ್ಲಿ ಸೋತರು. ನಂತರದ ಮೂರು ಸೆಟ್ ಗಳನ್ನು ಗೆದ್ದು ಸೆಮಿಗೆ ಲಗ್ಗೆ ಹಾಕಿದರು.

About The Author