Friday, April 18, 2025

Latest Posts

ಟಾಪ್ 10ರಿಂದ ಹೊರ ಬಿದ್ದ ವಿರಾಟ್: ಟಾಪ್ 5ರಲ್ಲಿ ಪಂತ್

- Advertisement -

ಲಂಡನ್: ಐಸಿಸಿ ಟೆಸ್ಟ್ ರಾಂಕಿಂಗ್ ಪ್ರಕಟಗೊಂಡಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ ಟಾಪ್ 10ರಿಂದ ಹೊರ ನೆಡೆದಿದ್ದಾರೆ.

ಬ್ಯಾಟಿಂಗ್ ವೈಫಲ್ಯ ಮುಂದುವರೆಸಿರುವ ವಿರಾಟ್ ಕೊಹ್ಲಿ 3 ಸ್ಥಾನದಿಂದ ಕುಸಿದು 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ನಿನ್ನೆ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧ ಮೊದಲೆರಡು ಇನ್ನಿಂಗ್ಸ್ ಗಳಲ್ಲಿ  11 ಮತ್ತು 20 ರನ್ ಕ್ರಮವಾಗಿ ಹೊಡೆದಿದ್ದಾರೆ.

ಇನ್ನು ವಿಕೆಟ್ ರಿಷಬ್ ಪಂತ್ ಟಾಪ್ 5ರಲ್ಲಿ ಸ್ಥಾನ ಪಡೆದಿದ್ದಾರೆ.  ಆಂಗ್ಲರ ವಿರುದ್ದ 146 ಮತ್ತು 57 ರನ್ ಸಿಡಿಸಿದ್ದಾರೆ. ಕಳೆದ 6 ಇನ್ನಿಂಗ್ಸ್ ಗಳಿಂದ ಪಂತ್ 2 ಶತಕ 3 ಅರ್ಧ ಶತಕ ಸಿಡಿಸಿದರು. 6 ಸ್ಥಾನ ಜಿಗಿದಿರುವ ಪಂತ್ ದೊಡ್ಡ ಸ್ಥಾನ ಪಡೆದಿದ್ದಾರೆ.

ಶತಕ ವೀರ ಜೋ ರೂಟ್ ಟೆಸ್ಟ್ ರಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಜಾನಿ ಬೇರ್ ಸ್ಟೊ 11ನೇ ಟೆಸ್ಟ್ ರಾಂಕಿಂಗ್ ಗೆ ಜಿಗಿದಿದ್ದಾರೆ.

 

- Advertisement -

Latest Posts

Don't Miss