Saturday, December 21, 2024

Latest Posts

ವರಸೆ ಬದಲಿಸಿದ ಸ್ಪೀಕರ್- ಸಂಜೆಗೆ ರಾಜೀನಾಮೆ ಇತ್ಯರ್ಥ ಅಸಾಧ್ಯ- ಸುಪ್ರೀಂಗೆ ಅರ್ಜಿ..!

- Advertisement -

ಬೆಂಗಳೂರು: ಶಾಸಕರ ರಾಜೀನಾಮೆ ರಗಳೆ ಮತ್ತೊಂದು ತಿರುವು ಪಡೆದಿದೆ. ಇಂದೇ ರಾಜೀನಾಮೆ ಬಗ್ಗೆ ಇತ್ಯರ್ಥ ಮಾಡಬೇಕು ಅನ್ನೋ ನಿರ್ದೇಶನ ಕುರಿತಾಗಿ ವಿಧಾನಸಭೆ ಸಭಾಪತಿ ರಮೇಶ್ ಕುಮಾರ್ ಇದೀಗ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಕಾಲಾವಕಾಶ ಕೋರಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಇತ್ಯರ್ಥ ರಗಳೆ ಸದಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇಂದೇ ಅತೃಪ್ತ ಶಾಸಕರನ್ನು ಖುದ್ದು ಭೇಟಿ ಮಾಡಿ ರಾಜೀನಾಮೆ ಅಂಗೀಕರಿಸೋ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಿ ಅಂತ ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್ ಗೆ ಸ್ಪೀಕರ್ ರಮೇಶ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಮೇಶ್ ಕುಮಾರ್, ಶಾಸಕರ ರಾಜೀನಾಮೆ ಅರ್ಜಿ ಕುರಿತು ಸಂಜೆ ವೇಳೆಗೆ ಸಾಧ್ಯವಾಗೋದಿಲ್ಲ. ಶಾಸಕರ ಅನರ್ಹತೆ ಕುರಿತಾದ ದೂರುಗಳ ಅರ್ಜಿಯೂ ನನ್ನ ಬಳಿ ಇದ್ದು, ನಾನು ಅದನ್ನೂ ಕೂಡ ಪರಿಶೀಲನೆ ನಡೆಸಬೇಕಿದೆ. ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ತನಿಖೆ ನಡೆಸಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ. ಹೀಗಾಗಿ ರಾಜೀನಾಮೆ ಇತ್ಯರ್ಥಕ್ಕೆ ಮಧ್ಯರಾತ್ರಿ 12ಗಂಟೆ ವರೆಗೆ ಸಮಯಾವಕಾಶ ಬೇಕು ಅಂತ ತಿಳಿಸಿದ್ದಾರೆ. ಇನ್ನು ತಮ್ಮ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಅಂತ ತಿಳಿಸಿದ್ದಾರೆ.

ಅಲ್ಲದೆ ಸುಪ್ರೀಂ ಕೋರ್ಟ್ ಸ್ಪೀಕರ್ ಗಳಿಗೆ ನಿರ್ದೇಶನ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಅಂತಲೂ ಸಹ ಸ್ಪೀಕರ್ ರಮೇಶ್ ಕುಮಾರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸುಪ್ರೀಂ ಕೋರ್ಟ್ ಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯಲಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=FuEb-SylrRM
- Advertisement -

Latest Posts

Don't Miss