Tuesday, August 5, 2025

Latest Posts

ಇಂದಿನಿಂದ ಕಾಮನ್ವೆಲ್ತ್ ಹಬ್ಬ: ಬರ್ಮಿಂಗ್‍ಹ್ಯಾಮ್‍ನಲ್ಲಿ  ಅದ್ದೂರಿ ಚಾಲೆನೆಗೆ ಕ್ಷಣಗಣನೆ 

- Advertisement -

ಬರ್ಮಿಂಗ್ ಹ್ಯಾಮ್:ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ವೆಲ್ತ್ ಗೇಮ್ಸ್‍ಗೆ ಇಂದು ಚಾಲನೆ ದೊರಕಲಿದೆ.

ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ನಲ್ಲಿ ಜು.`-28ರಿಂದ ಆಗಸ್ಟ್- 8ರ ತನಕ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 54 ಕಾಮನ್‍ವೆಲ್ತ್ ರಾಷ್ಟ್ರಗಳು ಮತ್ತು 18 ಪ್ರಾಂತ್ಯಗಳ ಒಟ್ಟು 72 ತಂಡಗಳು ಭಾಗವಹಿಸುತ್ತಿವೆ. ಭಾರತದಿಂದ  215 ಕ್ರೀಡಾಪಟುಗಳ  ತಂಡ ಈ ಕ್ರೀಡಾಕೂಟದಲ್ಲಿ  ಭಾಗವಹಿಸುತ್ತಿದೆ.

ಕಾಮನ್ವೆಲ್ತ್ ಗೇಮ್ಸ್ 1930ರಲ್ಲಿ ಕೆನಡಾದ ಹ್ಯಾಮಿಲ್ಟನ್‍ನಲ್ಲಿ ಪ್ರಾರಂಭವಾಯಿತು. ಜಾಗತಿಕ ಖ್ಯಾತಿಯ ಬಹು ಕ್ರೀಡಾಕೂಟಗಳ ಕ್ಷೇತ್ರದಲ್ಲಿ ಕಾಮನ್ವೆಲ್ತ್ ಗೇಮ್ಸ್ ಅನನ್ಯವಾಗಿದೆ. ಒಲಿಂಪಿಕ್ಸ್ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಜಾಗತಿಕ ಕ್ರೀಡಾಕೂಟವಾಗಿದ್ದರೂ ಇತರ ದೊಡ್ಡ ಹೆಸರಿನ ಕ್ರೀಡಾಕೂಟಗಳಲ್ಲಿ ಕಾಮನ್ವೆಲ್ತ್ ಗೇಮ್ಸ್ ಗೆ ಜಾಗತಿಕ ಮನ್ನಣೆ ಇದೆ.

ಹೆಸರೇ ಸೂಚಿಸುವಂತೆ ಕಾಮನ್ವೆಲ್ತ್ ಆಫ್ ನೇಷನ್ಸ್ ನ ಒಂದು ಕ್ರೀಡಾ ಸಂಘಟನೆಯಾಗಿ ಈ ಕ್ರೀಡಾಕೂಟ ಆರಂಭವಾಗಿದೆ. ಮೊದಲ ಕಾಮನ್ವೆಲ್ತ್ ಗೇಮ್ಸ್ 1930ರ ಆಗಸ್ಟ್-16ರಿಂದ 23ರವರೆಗೆ ನಡೆದಿದೆ. 11 ವಿವಿಧ ದೇಶಗಳು ಮತ್ತು  ಪ್ರಾಂತ್ಯಗಳಿಂದ 400 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಕಾಮನ್ವೆಲ್ತ್ ಗೇಮ್ಸ್‍ನಲ್ಲಿ ಭಾರತ

ಭಾರತ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿ ಭಾಗವಹಿಸಿದ್ದು 1934ರಲ್ಲಿ. ಲಂಡನ್ ನಲ್ಲಿ ನಡೆದ ಎರಡನೇ  ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ  ಭಾಗವಹಿಸಿದ ಮೊದಲ ಆವತ್ತಿಯಲ್ಲೇ ಪದಕ ಗೆದ್ದುಕೊಂಡಿತು.ಭಾರತದ ಕುಸ್ತಿಪಟು ರಶೀದ್ ಅನ್ವರ್ ಕಂಚಿನ ಪದಕದೊಂದಿಗೆ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವುದಕ್ಕೂ ಮುನ್ನ ನಡೆದ ಈ  ಕ್ರೀಡಾಕೂಟದಲ್ಲಿ ಕೇವಲ ಆರು ಭಾರತೀಯ ಕ್ರೀಡಾಪಟುಗಳು ಭಾಗವಹಿಸಿದ್ದರು.  ಭಾರತೀಯ ತಂಡವು ಅಥ್ಲೆಟಿಕ್ಸ್ ಮತ್ತು ಕುಸ್ತಿ ವಿಭಾಗಗಳಲ್ಲಿ ಮಾತ್ರ ಭಾಗವಹಿಸಿತ್ತು.

ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನ ಗೆಲ್ಲಲು ಭಾರತವು 1958ರವರೆಗೆ ಕಾಯಬೇಕಾಯಿತು. ಕಾರ್ಡಿಫ್ವೆಲ್ಸ್ ನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾ ಕ್ಷೇತ್ರದ ದಂತಕಥೆ ಮಿಲ್ಕಾ ಸಿಂಗ್ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಕೆನಡಾದ ಎಡ್ಮಂಟನ್‍ನಲ್ಲಿ ನಡೆದ 1978 ಕಾಮನ್ವೆಲ್ತ್ ಗೇಮ್ಸ್ ಆವತ್ತಿಯಲ್ಲಿ, ಮೊದಲ ಬಾರಿಗೆ ಭಾರತದ ಮಹಿಳಾಮಣಿಗಳು ಪದಕ ಗೆದ್ದರು. ಅಮಿ ಘಿಯಾ ಮತ್ತು ಕನ್ವಾಲ್ ಥಕರ್ ಸಿಂಗ್ ಜೋಡಿಯು ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.

ಡಿಸ್ಕಸ್ ಎಸೆತಗಾರ್ತಿ ಕಷ್ಣ ಪೂನಿಯಾ, ಮಿಲ್ಕಾ ಸಿಂಗ್ ಅವರ ಐತಿಹಾಸಿಕ ಸಾಧನೆಯ 52 ವರ್ಷಗಳ ಬಳಿಕ ಅಥ್ಲೆಟಿಕ್ಸ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಇತಿಹಾಸವನ್ನು ಹೊಂದಿದ್ದಾರೆ.

ದೆಹಲಿಯಲ್ಲಿ ನಡೆದ 2010ರ ಕಾಮನ್‍ವೆಲ್ತ್ ಗೇಮ್ಸ್  ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟ ಹೆಗ್ಗಳಿಕೆ ಕಷ್ಣ ಪೂನಿಯಾ ಅವರದ್ದು. ಮಾತ್ರವಲ್ಲ ಶೂಟರ್ ರೂಪಾ ಉನ್ನಿಕಷ್ಣನ್ 1998ರಲ್ಲಿ ಚಿನ್ನವನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಆಗಿರುವರು. ಇಲ್ಲಿಯವರೆಗೆ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯಂತ ಯಶಸ್ವಿ ಭಾರತೀಯ ಶೂಟರ್ ಎನಿಸಿಕೊಂಡವರು  ಜಸ್ಪಾಲ್ ರಾಣಾ. ಅವರು ಈ ಕ್ರೀಡಾ ಪರಂಪರೆಯಲ್ಲಿ ಒಟ್ಟು 15 ಪದಕಗಳನ್ನು ಗೆದ್ದಿರುವುದು ಭಾರತದ ಮಟ್ಟಿಗೆ ಐತಿಹಾಸಿಕ ಸಾಧನೆ.

ದೆಹಲಿಯಲ್ಲಿ ಶ್ರೇಷ್ಠ ಸಾಧನೆ :

ಭಾರತ ಕಾಮನ್ವೆಲ್ತ್ ಗೇಮ್ಸ್ ನ ಆತಿಥೇಯತ್ವವನ್ನು ಮೊದಲ ಬಾರಿ 2010ರಲ್ಲಿ ವಹಿಸಿಕೊಂಡಿತು. ದೆಹಲಿಯಲ್ಲಿ ನಡೆದ ಈ ಕಾಮನ್ವೆಲ್ತ್ ಗೇಮ್ಸ್‍ನಲ್ಲಿ ಭಾರತೀಯ ಕ್ರೀಡಾಪಟುಗಳು ಸರ್ವಶ್ರೇಷ್ಠ ಸಾಧನೆಯನ್ನು ಮಾಡಿರುವುದು ಇದುವರೆಗಿನ ದಾಖಲೆಯಾಗಿದೆ. ಮೊದಲ ಬಾರಿ ಪದಕಗಳ ಬೇಟೆಯಲ್ಲಿ ಶತಕದ ಸಾಧನೆಯನ್ನು ಮಾಡಿತು.

ಈ ಕ್ರೀಡಾಕೂಟದಲ್ಲಿ 39 ಚಿನ್ನದ ಪದಕ, 26 ಬೆಳ್ಳಿ ಹಾಗೂ 36 ಕಂಚಿನ ಪದಕ ಸೇರಿ ಒಟ್ಟು 101ಪದಕಗಳನ್ನು ಭಾರತ ಗೆದ್ದಿತ್ತು. 2002ರ ನಂತರದ ಎಲ್ಲಾ ಆವತ್ತಿಗಳಲ್ಲಿ ಭಾರತವು ಪದಕಗಳ ಪಟ್ಟಿಯಲ್ಲಿ ಅಗ್ರ ಐದು ಸ್ಥಾನಗಳಲ್ಲಿ ರಾರಾಜಿಸುತ್ತಾ ಬಂದಿದೆ. ಭಾರತವು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆಲ್ಲದೆ ಮರಳಿದ ಸಂದರ್ಭವೂ ಇದೆ.

1938ರ ಸಿಡ್ನಿ ಕಾಮನ್ವೆಲ್ತ್ ಗೇಮ್ಸ್ ಮತ್ತು 1954ರ ವ್ಯಾಂಕೋವರ್‍ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಯಾವುದೇ ಪದಕ ಗೆದ್ದಿಲ್ಲ. ಇದುವರೆಗೆ ಭಾರತ ಕಾಮನ್ವೆಲ್ತ್ ಗೇಮ್ಸ್  ಇತಿಹಾಸದಲ್ಲಿ 182 ಚಿನ್ನದ ಪದಕ ,173 ಬೆಳ್ಳಿ ಪದಕ ಹಾಗೂ 147 ಕಂಚಿನ ಪದಕ ಸೇರಿ ಒಟ್ಟು 502 ಪದಕಗಳನ್ನು ಬಾಚಿಕೊಂಡಿದೆ.

ಈ ಬಾರಿಯ ಕಾಮನ್‍ವೆಲ್ತ್ ಗೇಮ್ಸ್ ಗೆ  ಭಾರತ 215 ಕ್ರೀಡಾಪಟುಗಳ ನುರಿತ ಬಲಾಢ್ಯ ತಂಡವನ್ನು ಕಳಿಸಿಕೊಟ್ಟಿದೆ. ಕಳೆದ ಬಾರಿಯ ಕಾಮನ್ವೆಲ್ತ್ ಗೇಮ್ಸ್‍ಗಿಂತ ಈ ಬಾರಿಯ ಕ್ರೀಡಾಕೂಟದಲ್ಲಿ  ಉತ್ತಮ ಪ್ರದರ್ಶನವನ್ನು ಭಾರತೀಯ ಕ್ರೀಡಾಪಟುಗಳು ತೋರಲಿದ್ದಾರೆ ಎನ್ನುವ ಆಶಾಭಾವನೆ ವ್ಯಕ್ತವಾಗುತ್ತಿದೆ.

2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 66 ಪದಕಗಳನ್ನು ಪಡೆದುಕೊಂಡಿತ್ತು. ಈ ಮೂಲಕ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತರದ ಮೂರನೇ ಸ್ಥಾನವನ್ನು ಭಾರತ  ಪಡೆದುಕೊಂಡಿತ್ತು. ಭಾರತವು ಸಾಂಪ್ರದಾಯಿಕವಾಗಿ ಬಾಕ್ಸಿಂಗ್, ಬ್ಯಾಂಡ್ಮಿಟನ್, ಹಾಕಿ, ವೇಟ್‍ಲಿಫ್ಟಿಂಗ್, ಅತ್ಲೆಟಿಕ್ಸ್ , ಟೆನಿಸ್  ಹಾಗೂ ಮಹಿಳಾ ಕ್ರಿಕೆಟ್ ಇತ್ಯಾದಿಗಳಲ್ಲಿ ಬಲಿಷ್ಠ ವಿದ್ದುಘಿ,  ಈ ತಂಡಗಳ ಮೇಲೆ ಪದಕಗಳ ನಿರೀಕ್ಷೆಯೂ ಹೆಚ್ಚಿದೆ.

 

 

- Advertisement -

Latest Posts

Don't Miss