ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ವಿಳಂಬ ನೀತಿ ಅನುಸರಿಸಿದ್ರು ಅನ್ನೋ ಬಿಜೆಪಿ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ. ನಿಯಮಾವಳಿಗಳನ್ನೆಲ್ಲಾ ಬದಿಗಿಟ್ಟು ನಾನು ಮಿಂಚಿನ ವೇಗದಲ್ಲಿ ಕೆಲಸ ಮಾಡಬೇಕಿತ್ತಾ ಅಂತ ಪ್ರಶ್ನಿಸಿದ್ದಾರೆ.
ಅತೃಪ್ತ ಶಾಸಕರನ್ನು ಖುದ್ದು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಕಳೆದ ಶನಿವಾರದಂದು ನಾನು 12.45ರ ವೇಳೆ ಕಚೇರಿಯಿಂದ ಹೊರಹೋದ ಸಂದರ್ಭದಲ್ಲಿ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಲು ಬಂದಿದ್ದಾರೆ. ದೂರವಾಣಿ ಮೂಲಕವಾಗಲೀ, ಪತ್ರದ ಮೂಲಕವಾಗಲಿ ನನ್ನನ್ನು ಅವರು ಸಂಪರ್ಕಿಸಿರಲಿಲ್ಲ. ಇನ್ನು ಮಾರನೇ ದಿನ ಭಾನುವಾರ ನನ್ನ ಕಚೇರಿಗೆ ರಜೆ ಇತ್ತು. ವೈಯಕ್ತಿಕ ಕೆಲಸಗಳಿಂದಾಗಿ ನಾನು ಸೋಮವಾರ ರಜೆ ಮೇಲಿದ್ದೆ. ಆದ್ರೆ 8 ಶಾಸಕ ರಾಜೀನಾಮೆ ಪತ್ರ ನೀಡಲು ನಿಗದಿತ ನಮೂನೆಯಂತಿರಲಿಲ್ಲ. ಬಳಿಕ ನಾನು ಮಂಗಳವಾರ ಕಚೇರಿಗೆ ಬಂದ ಕೂಡಲೇ ಅವರಿಗೆ ಮತ್ತೆ ಕ್ರಮಬದ್ಧವಾಗಿ ರಾಜೀನಾಮೆ ನೀಡಬೇಕು ಅಂತ ತಿಳಿಸಿದೆ. ಉಳಿದ 5 ಜನರ ರಾಜೀನಾಮೆಯ ಸಹಜ ಮತ್ತು ಸ್ವಇಚ್ಛೆಯಿಂದಿದೆಯಾ ಅಂತ ಪರಿಶೀಲನೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ನಾನು ತಪ್ಪಿತಸ್ಥನಾಗುತ್ತೇನೆ. ಆದರೆ ಈ ಬಗ್ಗೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನಾನು ವಿಳಂಬ ನೀತಿ ಅನುಸರಿಸುತ್ತಿದ್ದೇನೆ ಅನ್ನೋ ಆರೋಪ ನನಗೆ ಬಹಳ ನೋವುಂಟು ಮಾಡಿದೆ. ಹಾಗಾದ್ರೆ ನಾನು ಮಿಂಚಿನ ವೇಗದಲ್ಲಿ ಕೆಲಸ ಮಾಡಬೇಕಿತ್ತಾ ಅಂತ ಸ್ಪೀಕರ್, ನಿಯಮಾವಳಿಗಳಿಗೆ ಗೌರವ ಕೊಡದೆ ಕೆಲವರು ಹೇಳಿದಂತೆ ಕೇಳಿ ಅವರ ಹಂಗಿನಲ್ಲಿ ಬದುಕಬೇಕಿತ್ತಾ ಅಂತ ಪ್ರಶ್ನಿಸಿದ್ರು.
ಬಿಜೆಪಿಯೇ ಪರವಾಗಿರಲಿಲ್ಲ…!!ಮಿಸ್ ಮಾಡದೇ ಈ ವಿಡಿಯೋ ನೋಡಿ