ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಗೌರವ ಪಡೆದ ಭಾರತೀಯ ಅಥ್ಲೀಟ್‍ಗಳು ಸಂತಸಗೊಂಡಿದ್ದಾರೆ. ಬರ್ಮಿಂಗ್‍ಹ್ಯಾಮ್ ಕ್ರೀಡಾಕೂಟದಲ್ಲಿ ಅದ್ಭುತ ಸಾಧನೆ ಮಾಡಿದ ಮಹಿಳಾ ತಾರಾ ಬಾಕ್ಸರ್ ನಿಖಾತ್ ಜರೀನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಕ್ಸಿಂಗ್ ಗ್ಲೌಸಗಳನ್ನು ಉಡುಗೊರೆಯಾಗಿ ನೀಡಿದರು.
ಮತ್ತೋರ್ವ ಮಹಿಳಾ ಅಥ್ಲೀಟ್ ಹಿಮಾದಾಸ್ ತಮ್ಮ ರಾಜ್ಯದ ಸಾಂಪ್ರದಾಯಿಕ ಅಸ್ಸಾಮಿ ಗೊಮಾಚಾ ( ಶಾಲು) ನೀಡಿದ್ದಾರೆ.
ಇನ್ನು ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಮಹಿಳಾ ಪ್ಯಾರಾ ಅಥ್ಲೀಟ್ ಭಾವಿನಾ ಪಟೇಲ್ ಸಹಿ ಹಾಕಿ ಟೀ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು.
ಗ್ಲೌಸ್ ಉಡುಗೊರೆಯಾಗಿ ನೀಡಿದ ಕುರಿತು ನಿಖಾತ್ ಜರೀನ್, ಎಲ್ಲಾ ಬಾಕ್ಸರ್‍ಗಳ ಸಹಿ ಒಳಗೊಂಡ ಗ್ಲೌಸ್ ಅನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟಿದ್ದು ತುಂಬ ಹೆಮ್ಮೆ ಅನಿಸುತ್ತಿದೆ. ಈ ಅವಕಾಶಕ್ಕಾಗಿ ಧನ್ಯವಾದ.ಸಹ ಅಥ್ಲೀಟ್‍ಗಳ ಜೊತೆ ಕಾಲ ಕಳೆದಿದ್ದು ತುಂಬ ದೊಡ್ಡ ದಿನವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಬೇಟಿಯಾಗಿದ್ದು ಹಾಗೂ ಮಾತನಾಡಿದ್ದು ತುಂಬ ದೊಡ್ಡ ಗೌರವ. ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ ಎಂದು ವೇಟ್ ಲಿಫ್ಟರ್ ಮೀರಾಬಾಯಿ ಚಾನು ತಿಳಿಸಿದ್ದಾರೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿ ಕಾಮನ್‍ವೆಲ್ತ್ ಕ್ರೀಡಾಕೂಟದ ಪದಕ ವಿಜೇತರನ್ನು ಅಭಿನಂದಿಸಿದರು.

