ಇಂದು ಲಂಕಾ ಬಾಂಗ್ಲಾ ಹೈವೋಲ್ಟೆಜ್ ಮ್ಯಾಚ್

ದುಬೈ:ಏಷ್ಯಾಕಪ್ ನಲ್ಲಿಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆಡಿದ ಮೊದಲ ಪಂದ್ಯಗಳನ್ನು ಕೈಚೆಲ್ಲಿರುವ ಬಾಂಗ್ಲಾ ದೇಶ ಮತ್ತು ಶ್ರೀಲಂಕಾ ತಂಡಗಳು ಮೊದಲ ಗೆಲುವಿಗಾಗಿ ಹೋರಾಡಲಿವೆ.

ಎರಡೂ ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಗೆದ್ದು ತಂಡ ಸೂಪರ್ 4 ಹಂತಕ್ಕೆ ಏರಲಿದೆ. ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ.

ಏಷ್ಯಾಕಪ್ ನ ಐದು ಬಾರಿ ಚಾಂಪಿಯನ್ ಶ್ರೀಲಂಕಾ ತಂಡ ಮೊದಲಿನ ತಂಡದಂತಿಲ್ಲ. ಪ್ರಸಕ್ತ ಏಷ್ಯಾ ಕಪ್ ನಲ್ಲಿ ಮೊದಲ ಪಂದ್ಯದಲ್ಲೆ ಅಫ್ಘಾನಿಸ್ಥಾನ ವಿರುದ್ಧ ಸೋಲು ಕಂಡಿತ್ತು.

ಭಾನುಕಾ ರಾಜಪಕ್ಸ್ ಬಿಟ್ಟರೆ ಬೇರೆ ಯಾವ ಬ್ಯಾಟರ್ ಆಡಲಿಲ್ಲ. ಬೌಲಿಂಗ್ ಕೂಡ ವೈಫಲ್ಯದಿಂದ ಕೂಡಿದೆ. ದುಷ್ಮಾಂತ್ ಚಮೀರಾ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ನಿರೀಕ್ಷಿಸಲಾಗಿದೆ.

ಇನ್ನು ಬಾಂಗ್ಲಾ ದೇಶ ತಂಡಕ್ಕೆ ಟಿ20 ಆವೃತ್ತಿ ಮತ್ತೆ ಯಶಸ್ಸು ತಂದುಕೊಟ್ಟಿಲ್ಲ. ಅನುಭವಿ ಆಟಗಾರರಿದ್ದರು ಯಶಸ್ಸು ಕಂಡಿಲ್ಲ. ಮೊದಲ ಪಂದ್ಯದಲ್ಲಿ ರಶೀದ್ ಮತ್ತು ಮಜೀಬ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 127 ರನ್ ಗಳಿಸಿತು.

ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

About The Author