ಬಿಎಂಟಿಸಿ ಬಸ್ ಹರಿದು ಪಾದಚಾರಿ ಮಹಿಳೆ ದುರ್ಮರಣ..!

Banglore News:

ಬಿಎಂಟಿಸಿ ಬಸ್ ಹರಿದು ಪಾದಚಾರಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ನಾಗರಬಾವಿಯ ಖಾಸಗಿ ಹೋಟೆಲ್​ ಬಳಿ ಈ ದುರಂತ ನಡೆದಿದೆ. ರಸ್ತೆ ದಾಟುತ್ತಿದ್ದಾಗ ಸುಮಾರು 60 ವರ್ಷದ ಮಹಿಳೆ ದುರ್ಮರಣ ಹೊಂದಿದ್ದಾರೆ. ಇದೀಗ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಿಎಂಟಿಸಿ ಬಸ್ ಗುದ್ದಿದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.  ಬೆಂಗಳೂರಿನ ನಾಗರಬಾವಿ ಸರ್ಕಲ್ ಬಳಿ ಈ  ಘಟನೆ ನಡೆದಿದೆ.  ರಸ್ತೆ ದಾಟುವ ವೇಳೆ ಬಸ್ ಗುದ್ದಿದ ಹಿನ್ನೆಲೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಮೃತ ಮಹಿಳೆಯ ವಯಸ್ಸು ಅಂದಾಜು 55 ವಯಸ್ಸಿನವರಾಗಿದ್ದು.  ಇಂದು ಸಂಜೆ 5:15ರ ಸುಮಾರಿಗೆ ಈ ಘಟನೆ ನಡೆದಿದೆ.  ಮೃತದೇಹವನ್ನ ನಾಗರಬಾವಿಯ ಜಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮೃತ ಮಹಿಳೆ ಸಂತೋಷಿ  ಎಂದು ಹೇಳಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

“ಭಾರತದ ಸಮುದ್ರಶಕ್ತಿಗೆ ಇಂದು ಬೃಹತ್ ದಿನ” : ಮೋದಿ

3 ದಿನ ಖಾಕಿ ಕಸ್ಟಡಿಗೆ ಮುರುಘ ಶ್ರೀಗಳು…!

BREAKING: ಸೆಪ್ಟೆಂಬರ್ 5ರವರೆಗೆ 3 ದಿನ ಮುರುಘಾ ಶ್ರೀ ಖಾಕಿ ಕಸ್ಟಡಿಗೆ

About The Author