ಹೊನ್ನಾವರ ತಾಲೂಕಿನಲ್ಲಿ ದರ್ಶನ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಪ್ರೊಮೋಷನ್

Honnavara  News:

ಸದ್ಯ  ಡಿ ಬಾಸ್  ಫ್ಯಾನ್ಸ್  ತಾವೇ ಕ್ರಾಂತಿ ಸಿನಿಮಾದ  ಪ್ರಚಾರದಲ್ಲಿ  ತೊಡಗಿದ್ದಾರೆ.  ಹೌದು  ದರ್ಶನ್  2 ವರ್ಷಗಳ  ಬಳಿಕ  ಮತ್ತೆ ತೆರೆ ಮೇಲೆ ಅಬ್ಬರಿಸೋದಕ್ಕೆ ರೆಡಿಯಾಗಿದ್ದಾರೆ. ಒಂದೆಡೆ ಕ್ರಾಂತಿ ಸಿನಿಮಾದ ಕೆಲವೊಂದು ಪೋಸ್ಟರ್ ಗಳನ್ನು ಬಿಡುಗಡೆ  ಮಾಡಿ  ಅಭಿಮಾನಿಗಳಿಗೆ  ಕುತೂಹಲ ಮೂಡಿಸುತ್ತಿದ್ರೆ. ಮತ್ತೊಂದೆಡೆ ಅದೇ  ಪೋಸ್ಟರ್ ಹಿಡಿದು  ಅನೇಕ ಅಭಿಮಾನಿಗಳು ತನ್ನ ನೆಚ್ಚಿನ ನಟನ  ಹೊಸ  ಸಿನಿಮಾವನ್ನು  ಪೊಮೋಟ್ ಮಾಡುತ್ತಿದ್ದಾರೆ.

ಹೌದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲೂಕಿನಲ್ಲಿ ದರ್ಶನ್ ಅಭಿಮಾನಿಗಳ ಕೆಲ  ಗುಂಪೊಂದು  ದರ್ಶನ್  ಕ್ರಾಂತಿ  ಸಿನಿಮಾದ  ಪೋಸ್ಟರ್ ಹಿಡಿದು ತಮ್ಮ ನೆಚ್ಚಿನ ನಟನ ಸಿನಿಮಾದ ಪ್ರೊಮೋಷನ್ ನಲ್ಲಿ ತೊಡಗಿದ್ದಾರೆ. ಮಾರಮ್ಮ ಯಾನೆ ದಂಡಿನ ದುರ್ಗಾ ದಲ್ಲಿ ದರ್ಶನ್  ಕ್ರಾಂತಿ  ಸಿನಿಮಾದ  ಪೋಸ್ಟರ್ ಗೆ  ಪೂಜೆ  ಸಲ್ಲಿಸಿ ನಂತರ ಕೈಯಲ್ಲಿ ಪೋಸ್ಟರ್ ಹಿಡಿದು  ಪ್ರೊಮೋಷನ್  ಕಾರ್ಯದಲ್ಲಿ ತೊಡಗಿದರು. ಜೊತೆಗೆ ಅಭಿಮಾನಿಗಳು  ವಾಹನದಲ್ಲಿ ದರ್ಶನ್ ಫ್ಲಾಗ್  ಹಿಡಿದು ಪೋಸ್ಟರ್ ಹಿಡಿದು ಊರಿನಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

 

ಸೋನು ಗೌಡ ಜೈಲಲ್ಲಿ ಸೆರೆಯಾಗಿದ್ದೇಕೆ..?!

ಉಪೇಂದ್ರ ನೀಡಿದ್ರು ಅಭಿಮಾನಿಗಳಿಗೆ ಅಭಿಯಾಣದ ಆಹ್ವಾನ…!

ತಂದೆಯಾಗುತ್ತಿದ್ದಾರೆ ಧ್ರುವ ಸರ್ಜಾ..!

About The Author