Banglore News:
ಮಂಡ್ಯದ ಮಳವಳ್ಳಿ ತಾಲೂಕಿನ ತೊರೆಕಾಡನ ಹಳ್ಳಿಯಲ್ಲಿ ಜಲಮಂಡಳಿ ಸಂಪೂರ್ಣ ಜಲಾವೃತವಾಗಿದೆ . ಜೊತೆಗೆ ಬೆಂಗಳೂರಿನ ಟಿ.ಕೆ ಹಳ್ಳಿಯಲ್ಲಿ ಜಲಘಟಕ ಸಂಪೂರ್ಣ ನೀರಿನಿಂದ ಆವೃತವಾಗಿದೆ. ಬೆಂಗಳೂರಿನ ಜನತೆ ಇದೇ ಜಲಮಂಡಳಿಯನ್ನು ಕುಡಿಯುವ ನೀರಿಗಾಗಿ ಅವಲಂಬಿಸಿದ್ದರು. ಇದೀಗ ಈ ಜಲಮಂಡಳಿ ಸಂಪೂರ್ಣ ಜಲಾವೃತವಾಗಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ನಿನ್ನೆ ರಾತ್ರಿಯ ಧಾರಾಕಾರ ಮಳೆಗೆ ಜಲಾಮಂಡಳಿ ಸಂಪೂರ್ಣವಾಗಿ ಜಲಾವೃತವಾಗಿದೆ. ಇದರಿಂದ ಯಂತ್ರೋಪಕರಣಗಳು ಸಂಪೂರ್ಣ ಮುಳುಗಡೆಯಾಗಿ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾ ಗಿದೆ. ಹಾಗೆಯೇ ನಿರಂತರವಾಗಿ ಇಂದು ಬೆಳಗ್ಗಿನಿಂದಲೇ ನೀರು ಹೊರಗೆ ಹಾಕುವ ಕಾರ್ಯ ನಡೆಯುತ್ತಿದೆ. ಈ ಜಲಕಂಟಕವನ್ನು ವೀಕ್ಷಿಸಲು ರಾಜ್ಯದ ಸಿಎಂ ಬೊಮ್ಮಾಯಿ ಧಾವಿಸಲಿದ್ದಾರೆ. ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಮುಗಿಸಿ ನಂತರ ಅಲ್ಲಿಂದ ಟಿ.ಕೆ ಹಳ್ಳಿಗೆ ಧಾವಿಸಿ ತದನಂತರ ಮಂಡ್ಯಕ್ಕೆ ಆಗಮಿಸಲಿದ್ದಾರೆ ಸಿಎಂ ಬೊಮ್ಮಾಯಿ.
ರೈತರೇ ಗಮನಿಸಿ: ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿ ಪ್ರಕ್ರಿಯೆ ಪ್ರಾರಂಭ
ಕರ್ನಾಟಕ -ಮಹಾರಾಷ್ಟ್ರ ಗಡಿವಿವಾದ :ಅನುಭವಿ ಕಾನೂನು ತಜ್ಞರ ನೇಮಕ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ




