ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಮಹತ್ವದ ಪಂದ್ಯದಲ್ಲಿ ಇಂದು ಭಾರತ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಇಲ್ಲಿನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊನ್ನೆ ಪಾಕಿಸ್ಥಾನ ವಿರುದ್ಧ ವಿರೋಚಿತವಾಗಿ ಸೋತ ಭಾರತ ಗಾಯಗೊಂಡ ಹುಲಿಯಂತಾಗಿದೆ. ಕಳೆಪೆಯಾಗಿವರು ಬೌಲಿಂಗ್ ವಿಭಾಗ ಮಾಡಿದ ತಪ್ಪಿನಿಂದ ಪಾಠ ಕಲಿತು ಹೆಚ್ಚು ಪ್ರಯೋಗ ಮಾಡದೇ ಒಳ್ಳೆಯ ಪ್ರದರ್ಶನ ನೀಡಬೇಕಿದೆ.
ಮೊನ್ನೆ ಪಾಕ್ ವಿರುದ್ಧ ಐದು ಬೌಲರ್‍ಗಳನ್ನು ಬಳಸಲಾಗಿತ್ತು. ವೇಗಿ ಭುವನೇಶ್ವರ್ ಕುಮಾರ್ ದುಬಾರಿ ಬೌಲರ್ ಆದರು. ಮೊದಲ ಪಂದ್ಯದಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಮತ್ತು ಚಾಹಲ್ ದುಬಾರಿಯಾದರು. ಜಡೇಜಾ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವರನ್ನು ಬಳಸಿ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಆವೇಶ್ ಖಾನ್ ಮೂರನೇ ವೇಗಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಶ್ವಕಪ್ ದೃಷ್ಟಿಯಿಂದ ತಂಡದಲ್ಲಿ ಪ್ರಯೋಗಗಳು ಮುಂದುವರೆಯಲಿದೆ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದರಿಂದ ಅತ್ಯುತ್ತಮ ಹನ್ನೊಂದರ ಬಳಗ ಸಿಗುವವರೆಗೂ ಹುಡುಕಾಟ ನಡೆಸಬಹುದು.
ಪಾಕ್ ವಿರುದ್ಧ ಸೋತಿರಬಹುದು ಆದರೆ ಬ್ಯಾಟಿಂಗ್‍ನಲ್ಲಿ ಸುಧಾರಿಸಿದೆ. ಕೆ.ಎಲ್. ರಾಹುಲ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದರು. ಕೊಹ್ಲಿ ಅರ್ಧ ಶತಕ ಸಿಡಿಸಿ ತಮ್ಮನ್ನು ಟೀಕಿಸುವವರಿಗೆ ಬ್ಯಾಟ್‍ನಲ್ಲಿ ಉತ್ತರ ಕೊಟ್ಟಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡ ಸುಧಾರಿಸಬೇಕಿದೆ. ಶ್ರೀಲಂಕಾ ವಿರುದ್ಧ ಅಗ್ರ ಮೂರು ಬ್ಯಾಟರ್‍ಗಳು ದೊಡ್ಡ ಮೊತ್ತ ಪೇರಿಸಿದರೇ ಭಾರತದ ಗೆಲುವು ನಿಶ್ಚಯವಾಗಲಿದೆ.
ಇನ್ನು ಶ್ರೀಲಂಕಾ ತಂಡ ಅ್ಘನಿಸ್ಥಾನ, ಬಾಂಗ್ಲಾದೇಶ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಚರಿತ್ ಅಸಲಂಕಾ, ಲಂಕಾ ಬ್ಯಾಟರ್‍ಗಳು ಮಿಂಚು ಹರಿಸಿದ್ದಾರೆ. ದಸಾನು ಶನಕಾ, ಕುಶಾಲ್ ಮೆಂಡೀಸ್, ಭಾನುಕಾ ರಾಜಪಕ್ಸ ಲಂಕಾದ ತಾರಾ ಬ್ಯಾಟರ್‍ಗಳಾಗಿದ್ದಾರೆ.
ಸಂಭಾವ್ಯ ತಂಡಗಳು:
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್, ದೀಪಕ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಘಿ, ಅಕ್ಷರ್ ಪಟೇಲ್, ಆರ್.ಅಶ್ವಿನ್. ಯಜ್ವಿಂದರ್ ಚಾಹಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಆರ್ಷದೀಪ್ ಸಿಂಗ್, ಆವೇಶ್ ಖಾನ್.
ಶ್ರೀಲಂಕಾ: ಪಾಥುಮ್ ನಿಸ್ಸಾಂಕಾ, ಕುಶಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರತ್ ಅಸಲಂಕಾ, ಧನುಷ್ಕಾ ಗುಣತಿಲಕಾ, ದಸಾನು ಶನಕಾ (ನಾಯಕ), ಭಾನುಕಾ ರಾಜಪಕ್ಸ, ವನಿಂದು ಹಸರಂಗಾ, ಚಾಮಿಕಾ ಕರುಣರತ್ನೆ, ಮಹೇಶ್ ತೀಕ್ಷ್ಣ, ಆಶಿತಾ ಫೆರ್ನಾಡೊ, ದಿಲ್ಶಾನ್ ಮಧುಶನಕಾ.