Thursday, August 21, 2025

Latest Posts

ಎದೆ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡ ರಶ್ಮಿಕಾ ಅಭಿಮಾನಿ..?!

- Advertisement -

Film News:

ನಟಿ ರಶ್ಮಿಕಾ ಮಂದಣ್ಣ ಅವರು ದೇಶಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದಾರೆ. ‘ಪುಷ್ಪ’ ಸಿನಿಮಾ ಗೆದ್ದ ಬಳಿಕ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶೈನ್ ಆಗುತ್ತಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದ್ರೆ   ಇಲ್ಲೊಬ್ಬ ಅಭಿಮಾನಿ ರಶ್ಮಿಕಾ ನೋಡಿ   ಏನು  ಮಾಡಿದ ಗೊತ್ತಾ  ಆತನ  ಅಭಿಮಾನದ  ವೀಡಿಯೋ  ಈಗ ಫುಲ್  ವೈರಲ್  ಆಗಿದೆ.

ಎಲ್ಲ ಭಾಷೆಯಲ್ಲೂ ರಶ್ಮಿಕಾ ಮಂದಣ್ಣ ಅವರನ್ನು ಇಷ್ಟಪಡುವ ಜನರಿದ್ದಾರೆ. ಅವರ ಜೊತೆ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಲಕ್ಷಾಂತರ ಮಂದಿ ಹಂಬಲಿಸುತ್ತಾರೆ. ಆಟೋಗ್ರಾಫ್ ಪಡೆಯಲು ಎಲ್ಲಿಲ್ಲದ ಸಾಹಸ ಮಾಡುತ್ತಾರೆ. ತುಂಬ ಲಕ್ಕಿ ಎಂಬಂತಹ ಅಭಿಮಾನಿಗಳಿಗೆ ಮಾತ್ರ ಅದೆಲ್ಲವೂ ಸಿಗುತ್ತದೆ. ಅದಕ್ಕಿಂತಲೂ ಹೆಚ್ಚು ಅದೃಷ್ಟವಂತರಾಗಿದ್ದರೆ ಎದೆ ಮೇಲೆ ಆಟೋಗ್ರಾಫ್ ಸಿಗುತ್ತದೆ ಎಂಬುದಕ್ಕೆ ಈ ಹೊಸ ಘಟನೆ ಸಾಕ್ಷಿಯಾಗಿದೆ.

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ರಶ್ಮಿಕಾ ಮಂದಣ್ಣ ಅವರ ಚರ‍್ಮ್ ಹೆಚ್ಚಾಗಿದೆ. ಸದ್ಯ ಅವರು ‘ಗುಡ್ಬೈ’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಅಕ್ಟೋಬರ್ ೭ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಹಲವು ನಗರಗಳಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅಪ್ಪಟ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಇತ್ತೀಚೆಗೆ ಎದುರಾದ ಅಭಿಮಾನಿಯೊಬ್ಬ ಆಟೋಗ್ರಾಫ್ ಮತ್ತು ಫೋಟೋ ಸಲುವಾಗಿ ಗೋಗರೆದಿದ್ದಾನೆ.

ಓಡೋಡಿ ಬಂದ ಅಭಿಮಾನಿಯು ‘ನಾನು ನಿಮ್ಮ ದೊಡ್ಡ ಫ್ಯಾನ್’ ಎಂದು ಹೇಳಿ ಪರಿಚಯ ಮಾಡಿಕೊಂಡ. ನಂತರ ಫೋಟೋ ಬೇಕು ಅಂತ ಅದನ್ನೂ ಗಿಟ್ಟಿಸಿಕೊಂಡ. ಬಳಿಕ ‘ನನ್ನ ಎದೆ ಮೇಲೆ ಆಟೋಗ್ರಾಫ್ ಹಾಕಿ’ ಎಂದು ಮನವಿ ಮಾಡಿಕೊಂಡ. ಅದಕ್ಕೆ ರಶ್ಮಿಕಾ ಮಂದಣ್ಣ ಹಿಂದೆ-ಮುಂದೆ ಯೋಚಿಸಲಿಲ್ಲ. ಕೂಡಲೇ ಮರ‍್ಕರ್ ಕೈಗೆತ್ತಿಕೊಂಡು ಅಭಿಮಾನಿಯ ಎದೆ ಮೇಲೆ ಹಸ್ತಾಕ್ಷರ ಹಾಕಿಯೇ ಬಿಟ್ಟರು. ಈ ಕ್ಯೂಟ್ ಘಟನೆ ಪಾಪರಾಜಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಸಿದ್ದರ‍್ಥ್ ಮಲ್ಹೋತ್ರಾ ಜೊತೆ ‘ಮಿಷನ್ ಮಜ್ನು’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಚಿತ್ರಕ್ಕೂ ರಶ್ಮಿಕಾ ನಾಯಕಿ. ದಕ್ಷಿಣ ಭಾರತದ ಸ್ಟಾರ್ ಹೀರೋಗಳ ಸಿನಿಮಾಗಳು ಕೂಡ ಅವರನ್ನೇ ಹುಡುಕಿಕೊಂಡು ಬರುತ್ತಿವೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ರಶ್ಮಿಕಾ ಮಂದಣ್ಣ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಹಲವಾರು ಬ್ರ‍್ಯಾಂಡ್ಗಳಿಗೆ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಜಾಹೀರಾತುಗಳಲ್ಲಿ ನಟಿಸುವ ಮೂಲಕ ಅವರು ಕೈ ತುಂಬ ಸಂಬಳ ಪಡೆಯುತ್ತಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!

ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕರಾವಳಿಯ ಸೋಶಿಯಲ್ ಮೀಡಿಯಾ ಸ್ಟಾರ್ ..!

- Advertisement -

Latest Posts

Don't Miss