Thursday, December 12, 2024

Latest Posts

ಮಹಾಕುಂಭ ಮೇಳ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ: ಡಾ: ಕೆ.ಸಿ ನಾರಾಯಣ ಗೌಡ

- Advertisement -

State News:

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ- ಪುರ- ಸಂಗಾಪುರ ಗ್ರಾಮಗಳ ಕಾವೇರಿ ನದಿ ಪಾತ್ರದಲ್ಲಿ ಅಕ್ಟೋಬರ್‌ 13 ರಿಂದ 16 ರವರೆಗೆ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ: ಕೆ.ಸಿ ನಾರಾಯಣಗೌಡ ಅವರು ತಿಳಿಸಿದರು.

ಅವರು ಇಂದು ಕೆ.ಆರ್.ಪೇಟೆಯ ಭೂ ವರಹನಾಥ ಸ್ವಾಮಿ ದೇವಸ್ಥಾನದ ಹತ್ತಿರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಹಾಸ ಅಕಾಡೆಮಿ ಯಿಂದ ಆಯೋಜಿಸಲಾಗಿದ್ದ ಜಲ ಸಾಹಸ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕರ್ನಾಟಕದಲ್ಲಿ ಮಹಾ ಕುಂಭಮೇಳವನ್ನು ಮಾಡಬೇಕು ಎಂಬುವಂತಹ ತೀರ್ಮಾನವನ್ನು ಶ್ರೀಶ್ರೀಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮಿಗಳು,ಸುತ್ತೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಮುಖದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಯಿತು. ಮಹಾ ಕುಂಭಮೇಳವನ್ನು ಯಶಸ್ವಿಯಾಗಿ ಆಚರಣೆ ಮಾಡಲು ಎಲ್ಲರ ಸಹಕಾರ ಹೆಚ್ಚಿನ ರೀತಿಯಲ್ಲಿ‌ ದೊರೆಯುತ್ತಿದೆ ಎಂದು ಹೇಳಿದರು.

ವಾರಾಣಸಿಗೆ ಹೋದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕುಂಭ ಮೇಳ ಆಚರಿಸುವ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಅವರಿಗೆ ತಿಳಿಸಿದಾಗ ಅವರು ಭಾಗವಹಿಸುವುದಾಗಿ ತುಂಬು ಹೃದಯದಿಂದ ತಿಳಿಸಿದ್ದಾರೆ ಎಂದರು.

ಕುಂಭ ಮೇಳ ಆಯೋಜನೆ ಸಂಬಂಧ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದ್ದು, ದಾನಿಗಳು ಈಗಾಗಲೇ 600 ಕ್ವಿಂಟಲ್ ಅಕ್ಕಿ, 25000 ತೆಂಗಿನಕಾಯಿ ಸೇರಿದಂತೆ ಎಣ್ಣೆ, ತುಪ್ಪ, ತರಕಾರಿ ಇನ್ನಿತರೆ ಆಹಾರ ಪದಾರ್ಥಗಳನ್ನು ಸಹ ನೀಡಿದ್ದಾರೆ ಎಂದರು.

ಮಹಾಕುಂಭ ಮೇಳವನ್ನು ಆಚರಣೆ ಕುರಿತು ಮಾನ್ಯ ಮುಖ್ಯ ಮಂತ್ರಿಗಳಿಗೆ ತಿಳಿಸಿದಾಗ ಬಹಳ ಖುಷಿಯಿಂದ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು ಎಂದರು.

ಅ.14 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಲಿದ್ದಾರೆ‌. ಅ.15 ರಂದು ಸಾಧು, ಸಂತರ ಸಂಗಮ ನಡೆಯಲಿದೆ. ಅ.16 ರಂದು ಕುಂಭ ಸ್ನಾನ, ವೇದಿಕೆ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಕುಂಭಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕುಂಭಸ್ನಾನ, ಸಾಧುಸಂತರ ಸಮಾವೇಶ, ವೇದಿಕೆ ಕಾರ್ಯಕ್ರಮ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಚಂದ್ರವನಾಶ್ರಮದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ‌ ಅವರು ಮಾತನಾಡಿ ಬಹಳಷ್ಟು ಸ್ಥಳಗಳಲ್ಲಿ‌ ಗುಪ್ತಗಾಮಿನಿ ನದಿಯಿಂದ ತ್ರಿವೇಣಿ ಸಂಗಮ ಇದೆ. ಆದರೆ ಅಂಬಿಗರಹಳ್ಳಿಯಲ್ಲಿ ಮೂರು ನದಿಗಳು ಸೇರುವುದನ್ನು ನೋಡಬಹುದು. ಸಂಗಮೇಶ್ವರರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಸಿದ್ಧಲಿಂಗೇಶ್ವರ ಯತಿಗಳು ಹಾಗೂ ಮಹದೇಶ್ವರರು ಬಂದಿ‌ ಹೋಗಿರುವ ಪವಿತ್ರ ಸ್ಥಳವಿದು ಎಂದರು.

2013 ರಲ್ಲಿ ಸಣ್ಣ ಪ್ರಮಾಣದಲ್ಲಿ ಕುಂಭ ಮೇಳ ನಡೆಸಲಾಗಿತ್ತು. ಈ ಬಾರಿ ವಿಜೃಂಬಣೆಯಿಂದ ಆಚರಿಸಿ, ದೇಶಕ್ಕೆ ತ್ರಿವೇಣಿ ಸಂಗಮ ಪರಿಚಯಿಸಲಾಗುತ್ತಿದೆ ಎಂದರು.

ಕುಂಭ ಇಡುವುದಕ್ಕೆ ಕುಂಬೇಶ್ವರ ಅಂತ ಕರೆಯಲಾಗುತ್ತದೆ. ವಿವಿಧ ಕಡೆಯಿಂದ ಸಾಧುಸಂತರರು ಬಹಳಷ್ಟು ಜನ ಬರುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲಾ ಸಾಧುಸಂತರಿಗೆ ಆಹ್ವಾನ ನೀಡಲಾಗಿದೆ. ಎಂದರು.

ಕುಂಭದ ಶಕ್ತಿಯನ್ನು ವಿಸರ್ಜನೆ ಮಾಡಿ ನಾಡಿಗಾಗಿ, ದೇಶಕ್ಕಾಗಿ, ವಿಶ್ವದ ಸುಖ, ಶಾಂತಿ ಸಮೃದ್ಧಿಯಾಗಲಿ ಎಂಬುವುದೇ ಇದರ ಉದ್ದೇಶ ಇಟ್ಟುಕೊಂಡು ಮಾಡಲಾಗುತ್ತಿದೆ ಎಂದರು.

ಮಹದೇಶ್ವರನ ದೇವರನ್ನು ಪ್ರತಿಷ್ಠಾಪನೆ ಮಾಡಿ ದೇವಾಲಯ ಪ್ರವೇಶ. ಅಕ್ಟೋಬರ್ 14 ರಂದು ಸಂಜೆಯಿಂದ ಅಕ್ಟೋಬರ್ 15, 16 ರಂದು ಬೆಳಿಗ್ಗೆಯವರೆಗೂ ಕುಂಭಮೇಳ ಸಂಬಂಧಪಟ್ಟಂತೆ ಕಳಸ‌ ಪೂಜೆಗಳು, ಹೋಮಗಳು ಮತ್ತು ಪ್ರತಿಯೊಂದು ಪೂಜೆಗಳನ್ನು ಮಾಡುವಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದರು

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ರೂಪಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾಸನ: ಆರ್.ಮೋಹನ್ ನೇತೃತ್ವದಲ್ಲಿ ವಾರ್ಡ್ ಪ್ರಮುಖರ ಸಭೆ ಮತ್ತು ನಗರಸಭೆ ಸದಸ್ಯರ ಸಮಾಲೋಚನಾ ಸಭೆ:

ತ್ರಿವೇಣಿ ಸಂಗಮ ಕೆ ಆರ್ ಪೇಟೆಯಲ್ಲಿ 4 ದಿನ ಮಹಾ ಕುಂಭ ಮೇಳ

ಚಾಲಕರೇ ಹುಷಾರ್…! ಮದ್ಯಾಹ್ನ ನಂತರ ಆಟೋ ರೋಡಿಗಿಳಿದ್ರೆ ಸೀಜ್..!

- Advertisement -

Latest Posts

Don't Miss