Wednesday, July 9, 2025

Latest Posts

Mangaluru: ಅಪ್ಪ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವು

- Advertisement -

Mangaluru: ಅಪ್ಪ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ 10 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಅಡ್ಯಾರ್‌ನಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ದಂಪತಿಯ ಮಗ ಅನೀಶ್ ಸಾವನ್ನಪ್ಪಿದ ಮಗುವಾಗಿದೆ.

ಮಗು ಬೀಡಿ ನುಂಗಿ ಅಸ್ವಸ್ಥವಾದಾಗ, ವೆನ್ಲಾಕ್ ಆಸ್ಪತ್ರೆಗೆ ಕರೆದ“ಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ.

ಮಗುವಿನ ತಂದೆ ಬೀಡಿ ಸೇರಿ, ಮನೆಯಲ್ಲಿ ಅಲ್ಲಲ್ಲಿ ಬಿಸಾಾಡುತ್ತಿದ್ದು, ಅದನ್ನು ಕಸದ ಬುಟ್‌ಟಿಗೆ ಹಾಕು ಎಂದು ಪತ್ನಿ ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ. ಆದರೆ ಇದೀಗ ಅವನದ್ದೇ ಮಗು, ಹಾಗೆ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ನುಂಗಿ ಸಾವಿಗೀಡಾಗಿದೆ ಎಂದು ತಾಯಿ ಆಕ್ರೋಶ ಹ“ರಹಾಕಿದ್ದಾಳೆ. ಅಲ್ಲದೇ, ಪತಿಯ ವಿರುದ್ಧ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

- Advertisement -

Latest Posts

Don't Miss