Sunday, December 22, 2024

Latest Posts

ರಾತ್ರಿಯಾದ್ರೂ ಮುಗಿದಿಲ್ಲ ಕಲಾಪ- ವಿಶ್ವಾಸಮತ ಯಾಚನೆಯದ್ದೇ ಆಲಾಪ..!

- Advertisement -

ಬೆಂಗಳೂರು: ನೀ ಕೊಡೆ ನಾ ಬಿಡೆ ಅನ್ನುವಂತಾಗಿದೆ ರಾಜ್ಯದ ವಿಧಾನಸಭೆಯ ಪರಿಸ್ಥಿತಿ. ಇತ್ತ ದೋಸ್ತಿ ಸದಸ್ಯರು ವಿಶ್ವಾಸಮತ ಯಾಚನೆಗೆ ಇನ್ನೆರಡು ದಿವಸ ಕಾಲಾವಕಾಶ ಕೊಡಿ ಎನ್ನುತ್ತಿದ್ದಂತೆ ಮತ್ತಷ್ಟು ಪಟ್ಟು ಹಿಡಿದಿರೋ ಪ್ರತಿಪಕ್ಷ ಬಿಜೆಪಿ ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು, ಎಷ್ಟೊತ್ತಾದ್ರೂ ಪರವಾಗಿಲ್ಲ ಅಂತ ಹೇಳುವ ಮೂಲಕ ಸದನವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ.

ರಾಜ್ಯ ವಿಧಾನಸಭೆ ರಾಜಕೀಯ ಬೃಹನ್ನಾಟಕಕ್ಕೆ ಸಾಕ್ಷಿಯಾಗಿದೆ. ಅತೃಪ್ತರ ಮನವೊಲಿಸುವಲ್ಲಿ ವಿಫಲವಾಗಿರೋ ದೋಸ್ತಿ ನಾಯಕರು ಅಧಿಕಾರ ಕೆಳಗಿಳಿಯುವ ಭೀತಿಯಿಂದಾಗಿ ವಿಶ್ವಾಸಮತ ಯಾಚನೆಗೆ ಹಿಂದೇಟು ಹಾಕುತ್ತಿದ್ದಾರೆ. ಅತ್ತ ಪಟ್ಟು ಬಿಡದ ಬಿಜೆಪಿ ಅದೇನೇ ಆಗಲಿ ಇಂದೇ ವಿಶ್ವಾಸಮತ ಯಾಚನೆಯಾಗಲೇಬೇಕು ಅಂತ ಊಟವನ್ನೂ ಮಾಡದೇ ಸದನದಲ್ಲಿ ಪಟ್ಟಾಗಿ ಕುಳಿತಿದೆ. ಇವರ ಮಧ್ಯೆ ಸ್ಪೀಕರ್ ಕೂಡ ಸದಸ್ಯರ ಚರ್ಚೆಗೆ ಅವಕಾಶ ನೀಡಿದ್ದು ತಾವು ಕೂಡ ಎಷ್ಟೊತ್ತಾದರೂ ಸದನದಲ್ಲೇ ಇರಲು ಮಾನಸಿಕನಾಗಿ ಸಿದ್ಧನಿದ್ದೇನೆ ಎಂದಿದ್ದಾರೆ.

ಇನ್ನು ವಿಧಾನಸೌಧದ ಕ್ಯಾಂಟೀನ್ ಗಳು ಬಂದ್ ಆಗಿರೋದ್ರಿಂದ ಸದಸ್ಯರು ಈವರೆಗೂ ಊಟವನ್ನೂ ಮಾಡದೆ ಚರ್ಚೆಯಲ್ಲಿ ತೊಡಗಿದ್ದಾರೆ. ಆಗೊಮ್ಮೆ ಈಗೊಮ್ಮೆ ದೋಸ್ತಿ ಸದಸ್ಯರು ಸದನವನ್ನು ನಾಳೆಗೆ ಮುಂದೂಡುವಂತೆ ಸದ್ದು ಮಾಡುತ್ತಿದ್ದರೂ ಬಗ್ಗದ ಬಿಜೆಪಿ ಸದನ ಮುಂದುವರಿಯಲಿ ಅಂತ ಹಠಕ್ಕೆ ಬಿದ್ದು ಕುಳಿತಿದೆ. ಮಧ್ಯರಾತ್ರಿ 1 ಗಂಟೆಯಾದ್ರೂ ಪರವಾಗಿಲ್ಲ ಇಲ್ಲೇ ಊಟದ ವ್ಯವಸ್ಥೆ ಮಾಡಿಸಿ ನಾವು ಇಲ್ಲಿಂದ ಕದಲೋದಿಲ್ಲ ಅಂತ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸ್ಪೀಕರ್ ಗೆ ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss