‘ರಾಹುಲ್‌ಗಾಂಧಿ ಕಾಲಿಟ್ಟ ಕಡೆಯಲೆಲ್ಲಾ ಕಾಂಗ್ರೆಸ್ ಸೋತಿದೆ’

ಹಾಸನ: ಹಾಸನದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, 18 ಕ್ಷೇತ್ರಗಳಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಮುಗಿಸಿ ಇವತ್ತು ಹಾಸನಕ್ಕೆ ಬಂದಿದ್ದೇವೆ. ಈಗಾಗಲೇ ರಾಜ್ಯದಲ್ಲಿ ಎರಡು ತಂಡಗಳಲ್ಲಿ ಸಂಕಲ್ಪ ಯಾತ್ರೆ ಮಾಡಿದ್ದೇವೆ. ನಮ್ಮ ಸರ್ವೋಚ್ಚ ನಾಯಕ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಒಂದು ಯಾತ್ರೆ, ನನ್ನ ನೇತೃತ್ವದಲ್ಲಿ ಒಂದು ಯಾತ್ರೆ ಮಾಡುತ್ತಿದ್ದೇವೆ. ಅಲ್ಲದೇ, ಅವರ ನೇತೃತ್ವದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ಸರ್ಕಾರದ ಯೋಜನೆಗಳನ್ನು ತಿಳಿಸುವ ಕೆಲಸ ಮಾಡಿದ್ದೇವೆ. ಅಭೂತಪೂರ್ವವಾದ ಬೆಂಬಲ ಎಲ್ಲಾ ಕಡೆ ಸಿಗ್ತಿದೆ ಎಂದಿದ್ದಾರೆ.

‘ಸಿಎಸ್ ಪುಟ್ಟರಾಜುಗೆ ನಾನು ಯಾಕೆ ಫ್ರೀ ಪಬ್ಲಿಸಿಟಿ ಕೊಡ್ಲಿ..?’

ಡಿ.ಕೆ.ಶಿವಕುಮಾರ್ ಹಳೇ ಫ್ರೆಂಡ್ಸ್‌ಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಳೀನ್, ಅವರ ಹಳೇಯ ಫ್ರೆಂಡ್ಸ್ ಯಾರು ಬಿಜೆಪಿಗೆ ಬಂದಿದ್ದಾರೆ. ಯಾರೂ ವಾಪಾಸ್ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಸ್ಪಷ್ಟವಾದಂತಹ ಉತ್ತರವನ್ನು ಈಗಾಗಲೇ ಎಸ್.ಟಿ.ಸೋಮಶೇಖರ್ ಕೊಟ್ಟಿದ್ದಾರೆ ಎಂದು ಕಟೀಲ್ ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಿಂದ 130-150 ಸೀಟ್ ಗೆಲ್ಲುತ್ತೇವೆ ಎಂಬ ಮಾಜಿಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಳೀನ್, ಸಿದ್ಧರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್, ರಾಹುಲ್‌ಗಾಂಧಿ ಜೊತೆ ಹೆಜ್ಜೆ ಹಾಕಿದ್ರು. ಕೊಳ್ಳೆಗಾಲದಿಂದ ಪ್ರಾರಂಭ ಮಾಡಿದರು. ಅಲ್ಲಿ ಏಳರಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಪಡೆದಿದೆ, ಅಲ್ಲಿ ಏನು‌ ಪರಿಣಾಮ ಆಗಲಿಲ್ಲ. ಬಿಜಾಪುರದಲ್ಲಿ ಬಿಜೆಪಿ‌ ನಗರ ಪಾಲಿಕೆಯನ್ನು ಹಿಡಿದಿದೆ . ಮೊನ್ನೆ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಎಲ್ಲಾ ಫಲಿತಾಂಶ ಬಿಜೆಪಿ ಪರವಾಗಿ ಇದೆ ಎಂದು ಕಟೀಲ್ ಹೇಳಿದ್ದಾರೆ.

ಶಾಸಕ ಎಮ್ ಪಿ ರೇಣುಕಾಚಾರ್ಯರ ಅಣ್ಣನ ಮಗ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ತುಂಗಾ ಕಾಲುವೆಯಲ್ಲಿ ಕಾರು ಪತ್ತೆ

ಅಲ್ಲದೇ, ರಾಹುಲ್‌ಗಾಂಧಿ ಕಾಲಿಟ್ಟ ಕಡೆಯಲೆಲ್ಲಾ ಕಾಂಗ್ರೆಸ್ ಸೋತಿದೆ. ಅವರು ಇಲ್ಲಿ ಪ್ರಯತ್ನ ಮಾಡುವುದಕ್ಕಿಂತ ಅಮೇಥಿಯಲ್ಲಿ ಸ್ವಲ್ಪ ಪ್ರಯತ್ನ ಮಾಡೋದು ಒಳ್ಳೆಯದು, ಇನ್ನಷ್ಟಾದರೂ ಸೀಟ್ ಗಟ್ಟಿಯಾಗುತ್ತೆ. ರಾಹುಲ್‌ಗಾಂಧಿ ಅಲ್ಲಿ ಗೆಲ್ಲುವಂತಹ ಪ್ರಯತ್ನ ಮಾಡದ್ರೆ ಏನಾದ್ರು ಆಗುತ್ತೆ. ಕರ್ನಾಟಕದಲ್ಲಿ ಏನು ಲಾಭವಿಲ್ಲ, ಇದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಸುಮ್ಮನೆ ಸಿದ್ದರಾಮಣ್ಣ ಸುದ್ದಿಯಲ್ಲಿರಬೇಕೆಂದು ಏನೇನೋ ಹೇಳಿಕೆ ಕೊಡ್ತಿದ್ದಾರೆ ಎಂದು ನಳೀನ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ನಳೀನ್ ಕುಮಾರ್, ಮುಖ್ಯಮಂತ್ರಿಗಳು ಸಮಯ, ಸಂದರ್ಭ ನೋಡಿಕೊಂಡು ಎಲ್ಲಾ ವ್ಯವಸ್ಥೆ ಮಾಡಿಕೊಂಡು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳೇ ಹೈಕಮಾಂಡ್ ಮುಖಾಂತರ ಹೋದಾಗ ಚರ್ಚೆ ಆಗುತ್ತೆ, ಮಾಡಿಲ್ಲ ಮಾಡ್ತಾರೆ ಎಂದಿದ್ದಾರೆ.

ಸಚಿವ ಶ್ರೀರಾಮಲು ಅಹೋರಾತ್ರಿ ಪ್ರತಿಭಟನೆ ವಿಚಾರದ ಪ್ರತಿಕ್ರಿಯಿಸಿದ ಕಟೀಲ್, ಅಸಹಾಯಕರಿಲ್ಲ ಅವರೇ ಮಾಡಬೇಕಾಗಿದೆ, ಈಗಾಗಲೇ ಅದಕ್ಕೆ ಏನು ಮಾಡಬೇಕು ಮಾಡಿದ್ದಾರೆ .ಆದರೆ ತಕ್ಷಣ ಆಗಬೇಕೆಂದು ಊರಿನವರ ಬೇಡಿಕೆ ಇದೆ. ನಾನೊಬ್ಬ ಸಚಿವನಾಗಿ ಸ್ಪಂದಿಸಬೇಕು ಎಂಬ ಕಾರಣಕ್ಕೆ ಪ್ರತಿಭಟನೆ ಕೂತಿದ್ದಾರೆ, ತಕ್ಷಣ ಆಗುತ್ತೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

About The Author