Friday, September 26, 2025

Latest Posts

ನದಿಯ ಮೇಲೆ ಆಣೆ ಮಾಡಲು ಹೋಗಿ ಕಾಲು ಜಾರಿ ಬಿದ್ದು ಇಬ್ಬರ ದುರ್ಮರಣ..

- Advertisement -

ಹಾಸನ : ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ.  ಚಂದ್ರು (35), ಆನಂದ್ (30), ಮೃತ ದುರ್ದೈವಿಗಳಾಗಿದ್ದು, ವ್ಯವಹಾರದ ವಿಚಾರವಾಗಿ ಗಂಗೆ ಮೇಲೆ ಆಣೆ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ.

ನಿನ್ನೆ ರಾತ್ರಿ ತೇಜೂರು ಕೆರೆಯ ಬಳಿ ನೀರಿನ ಮೇಲೆ ಆಣೆ ಮಾಡಲು ಹೋಗಿದ್ದರು. ಸಿಹಿ ತಿಂಡಿ ತಯಾರಿಸುವ ಕೆಲಸಕ್ಕೆ ಹಣ ಪಡೆದು, ಕೆಲಸಕ್ಕೆ ಹೋಗದ ಕಾರಣ ಗಂಗೆ ಮೇಲೆ ಆಣೆ ಮಾಡಲು ಇಬ್ಬರೂ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಇಬ್ಬರೂ ಸಾವನ್ನಪ್ಪಿದ್ದಾರೆ. ಸ್ಥಳೀಯರು ಬೆಳಿಗ್ಗೆ ಶವ ಹೊರ ತೆಗೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೆ.ಆರ್.ಪೇಟೆಯಲ್ಲಿ ಮಳೆ ಹಾನಿಗೊಳಗಾದ ರಸ್ತೆಗಳ ದುರಸ್ಥಿಗೆ 15 ಕೋಟಿ ಬಿಡುಗಡೆ: ಸಚಿವ ಡಾ.ನಾರಾಯಣಗೌಡ

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟಿ ಅದಿತಿ ಪ್ರಭುದೇವ್

- Advertisement -

Latest Posts

Don't Miss