ಗಾಂಜಾ ಪ್ರಕರಣಕ್ಕೆ ಬಂಧಿಸಲಾದ ವ್ಯಕ್ತಿ ಪೊಲೀಸರ ನಿರ್ಲಕ್ಷ್ಯಕ್ಕೆ ಬಲಿ..?

ಬೆಳಗಾವಿ: ಪೊಲೀಸರ ನಿರ್ಲಕ್ಷ್ಯಕ್ಕೆ ಬಸನಗೌಡ ಪಾಟೀಲ್ ಎಂಬ ವ್ಯಕ್ತಿ ಬಲಿಯಾಗಿದ್ದಾರೆ. ಗಾಂಜಾ ಪ್ರಕರಣದಲ್ಲಿ ವಶಕ್ಕೆ ಪಡೆದು ಬೆಲ್ಲದ ಬಾಗೇವಾಡಿಗೆ ಪೊಲೀಸರು ಕರೆತರುತ್ತಿದ್ದರು. ದಾರಿ ಮಧ್ಯೆ ಕಾಕತಿ ಬಳಿ ಬಸನಗೌಡ ಪಾಟೀಲ್ ಆರೋಗ್ಯದಲ್ಲಿ ಏರುಪೇರಾಗಿತ್ತು. ನಂತರ ಕಾಕತಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಪ್ರಯಾಣ ಬೆಳೆಸಿ, ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಗೆ ಪೊಲೀಸರು ಕರೆ ತಂದಿದ್ದರು.

ಸೈಬರ್ ವಂಚನೆಯಿಂದ ಉಪನ್ಯಾಸಕಿ ಆತ್ಮಹತ್ಯೆ

ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಮತ್ತೆ ಅಸ್ವಸ್ಥನಾಗಿದ್ದರಿಂದ ಬಸವಗೌಡನನ್ನು ನಂತರ ಬಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಸನಗೌಡನಿಗೆ ಇಸಿಜಿ ಮಾಡಿದಾಗ ಹೃದಾಯಾಘಾತ ವಾಗಿರುವುದು ಮಾಹಿತಿ ಬರುತ್ತದೆ. ನಂತರ  ಹೆಚ್ಚಿನ ಚಿಕಿತ್ಸೆಗೆಂದು ಐಸಿಯುಗೆ ದಾಖಲಿಸಿದರೂ ಬಿಮ್ಸ್ ನಲ್ಲಿ ಚಿಕಿತ್ಸೆ ಫಲಿಸದೆ ಬಸನಗೌಡ (45) ಸಾವನ್ನಪ್ಪಿದ್ದಾರೆ. ಪೊಲೀಸರ ಮೇಲೆ ಅನುಮಾನ ಸೃಷ್ಠಿಯಾಗಿದ್ದು, ಸಾರ್ವಜನಿಕರು ಪೊಲೀಸರ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮರಳುಗಾರಿಕೆ ತಡೆಯಲು ಕೊಪ್ಪಳ ಎಸ್ ಪಿಯಿಂದ ಹೊಸ ಮಾರ್ಗ

ಪದ್ಮಶ್ರೀ ಪುರಸ್ಕೃತ, ಗಣಿತಜ್ಞ ಆರ್ ಎಲ್ ಕಶ್ಯಪ್ ಇನ್ನಿಲ್ಲ

About The Author