ಚಂದ್ರನಲ್ಲಿ ಕಾಲಿಟ್ಟಾತ 93ನೇ ವಯಸ್ಸಿಗೆ ಮದುವೆಯಾದ…!

America News:

1969 ಜುಲೈ 20ರಂದು, ಮಿಷನ್ ಕಮಾಂಡರ್ ನೈಲ್ ಆರ್ಮ್‌ಸ್ಟ್ರೋಂಗ್‌ರ ನಂತರ ಬಜ್ ಆಲ್ಡ್ರಿನ್ ಅವರು ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿಯಾಗಿದ್ದಾರೆ.ಜನವರಿ 20 ರಂದು 93 ನೇ ವರ್ಷಕ್ಕೆ ಕಾಲಿಟ್ಟ ಆಲ್ಡ್ರಿನ್ ಅವರು ತಮ್ಮ ಮದುವೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ದೀರ್ಘಕಾಲದ ಸಂಗಾತಿ ಡಾ ಅಂಕಾ ಫೌರ್ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ವಿವಾಹವಾಗಿದ್ದಾರೆ. ಇನ್ನು ಲಾಸ್ ಏಂಜಲೀಸ್‌ನಲ್ಲಿ ನಡೆದ ಸಣ್ಣ ಖಾಸಗಿ ಸಮಾರಂಭದಲ್ಲಿ ನಾವು ಮದುವೆಯಾಗಿರುವುದು ಸಂತೋಷವಾಗಿದೆ ಎಂದು ಬಜ್ ಆಲ್ಡ್ರಿನ್ ತಿಳಿಸಿದ್ದಾರೆ.ಇದು ಆಲ್ಡ್ರಿನ್ ಅವರ ನಾಲ್ಕನೇ ವಿವಾಹವಾಗಿದ್ದು, ಅವರ ಪತ್ನಿ, ಡಾ ಅಂಕಾ ಫೌರ್, ಬಜ್ ಆಲ್ಡ್ರಿನ್ ವೆಂಚರ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ.

ಮೋದಿ ಬಗ್ಗೆ ಮಾತನಾಡಿದ ಪಾಕಿಸ್ತಾನ ಸಚಿವೆ..!

ಕಾರ್ ಗಳನ್ನು ವಾಪಸ್ ಪಡೆದುಕೊಳ್ಳುತ್ತಿರುವ ಮಾರುತಿ ಸುಜಿಕಿ

ನೌಕರರ ಕಡಿತಕ್ಕೆ ಮುಂದಾದ ಮೈಕ್ರೋಸಾಫ್ಟ್…!

About The Author