ತಮಿಳುನಾಡಿನಲ್ಲಿ ಜಯಮ್ಮ..?! ಹಾಸನದಲ್ಲಿ ಭವಾನಿ ಅಮ್ಮ…!

Hassan News:

ಹಾಸನದಲ್ಲಿ ಟಿಕೆಟ್ ಜಟಾಪಟಿ  ಜೋರಾಗಿದೆ.ಹೆಚ್ ಡಿ ಕುಮಾರಸ್ವಾಮಿ ಭವಾನಿ  ರೇವಣ್ಣ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಋಣಾತ್ಮಕವಾಗಿ  ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ರೇವಣ್ಣ ಕುಟುಂಬದ ಅಭಿಮಾನಿಗಳು ಪ್ರತಿಭಟನೆಯನ್ನೂ ಮಾಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಬಿಯಾನವೊಂದನ್ನು ಶುರು ಮಾಡಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಇದೀಗ ತಮಿಳುನಾಡಿನ ಜಯಲಲಿತ ಮಾದರಿಯಾಗಿ ಭವಾನಿ ರೇವಣ್ಣರವರನ್ನು ಪ್ರತಿಬಿಂಬಿಸಿ  ಪೋಸ್ಟರ್ ವೈರಲ್ ಮಾಡಿದ್ದಾರೆ.

ಕರ್ನಾಟಕದ ಅಮ್ಮ ಭವಾನಿ ರೇವಣ್ಣ​​: ಸೋಶಿಯಲ್​ ಮೀಡಿಯಾದಲ್ಲಿ ಕಾರ್ಯಕರ್ತರ ಫೈಟ್​​

ತಮಿಳುನಾಡಿನ ಹೆಸರಾಂತ ರಾಜಕಾರಣಿ ಜಯಲಲಿತ ಜನಪರ ಕಾರ್ಯಗಳನ್ನು ಮಾಡಿ ಹೆಸರುವಾಸಿಯಾದವರು.ಇದೀಗ ಭವಾನಿ ರೇವಣ್ಣ ಅಭಿಮಾನಿಗಳು ತಮಿಳುನಾಡಿಗೆ ಜಯಮ್ಮ ಹೇಗೋ ಹಾಸನಕ್ಕೆ ಭವಾನಿ ರೇವಣ್ಣ ಎಂಬುವುದಾಗಿ ಜಯಲಲಿತ ಮತ್ತು ಭವಾನಿ ರೇವಣ್ಣ ಅವರ ಫೋಟೋ ಭಿತ್ತಿಸಿ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಜೊತೆಗೆ ಕರ್ನಾಟಕದ ಮಹಿಳಾ ಶಕ್ತಿ ಮತ್ತೊಂದು ಭರವಸೆ ಭವಾನಿ ಅಮ್ಮ ಎಂಬುವುದಾಗಿ ಬರೆದುಕೊಂಡು ಭವಾನಿ ರೇವಣ್ಣ ಗೆ ಟಿಕೆಟ್ ನೀಡಲು ಪಟ್ಟು ಹಿಡಿದು ಕುಳಿತಿದ್ದಾರೆ.

ಡಾ|| ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ಸಜ್ಜು…!

ಹಾಸನದಲ್ಲಿ ಟಿಕೇಟ್ ಪೈಪೋಟಿ: ಹೆಚ್.ಡಿ.ಕೆಗೆ ಟಾಂಗ್ ಕೊಟ್ಟ ಸೂರಜ್ ರೇವಣ್ಣ

ಶಿವಮೊಗ್ಗ:ಸಂಚಾರಕ್ಕೆ ಅಡಚಣೆಯಾಗುತ್ತಿವೆ ಕುದುರೆಗಳು…!

About The Author