Saturday, July 5, 2025

Latest Posts

ಡಿಕೆಶಿ ಹರಿದ ಚಪ್ಪಲಿ ಹಾಕಿದ್ದ.. ಲೂಟಿ, ಹಗರಣ ಮಾಡಿ ಬಂದಿದ್ದಾನೆ’: ಜಾರಕಿಹೊಳಿ

- Advertisement -

Political News:

ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.1985ರಲ್ಲಿ ನಾನು, ಡಿಕೆ ಶಿವಕುಮಾರ್ ಇಬ್ಬರೂ ಒಟ್ಟಿಗೆ ಚುನಾವಣೆಗೆ ಬಂದೆವು. ನಾನು ಉದ್ಯಮ ನಡೆಸಿ ಈ ಹಂತಕ್ಕೆ ಬಂದಿದ್ದೇನೆ. ಡಿ.ಕೆ.ಶಿವಕುಮಾರ್​ ಲೂಟಿ ಮಾಡಿ ಕೋಟ್ಯಂತರ ಹಣ ಮಾಡಿದ್ದಾನೆ. ನಾನು ಕಾಂಗ್ರೆಸ್​ನಲ್ಲಿ ಸ್ಪರ್ಧೆ ಮಾಡಿದಾಗ, ಡಿಕೆಶಿ ಹರಿದ ಚಪ್ಪಲಿ ಹಾಕುತ್ತಿದ್ದ. ಈಗ ಸಾವಿರಾರು ಕೋಟಿ ಒಡೆಯ, ರಾಜ್ಯ ಲೂಟಿ ಮಾಡಿ ಬಂದಿದ್ದಾನೆ ಅಂತ ಏಕವಚನದಲ್ಲೇ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.
ಜಲಸಂಪನ್ಮೂಲ ಇಲಾಖೆ ಸಚಿವನಾಗಿದ್ದಾಗ ಟೆಂಡರ್​ಗೆ ಒತ್ತಡ: ನಾನು ಜಲಸಂಪನ್ಮೂಲ ಇಲಾಖೆ ಸಚಿವನಾಗಿದ್ದಾಗ ಅವರು ಹೇಳಿದವರಿಗೆ ಟೆಂಡರ್​ ನೀಡುವಂತೆ ಒತ್ತಾಯಿಸುತ್ತಿದ್ದರು. ಅವರು ಹೇಳಿದಂತೆ ಇಲಾಖೆಯನ್ನು ಒಪ್ಪಿಸಲು ನಾನು ನಿರಾಕರಿಸಿದೆ. ಅವರು ಹೇಳಿದಂತೆ ಕೇಳದಿದ್ದಾಗ ಸಿ.ಡಿ. ಬಿಡುಗಡೆ ಮಾಡಿದರು ಎಂದು ಸಿ.ಡಿ. ಪ್ರಕರಣದ ಬಗ್ಗೆ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ  ಬಿಚ್ಚಿಟ್ಟಿದ್ದಾರೆ.

ಸಿಡಿ ಸಾಹುಕಾರ್ ಆಡಿಯೋ ಬ್ಲಾಸ್ಟ್ ನಲ್ಲಿದೆ ಡಿಕೆಶಿ  ಜನ್ಮಜಾಲ..!

ಆಡಿಯೋ ಬಾಂಬ್ ಸಿಡಿಸಿದ ಸಿಡಿ ಸಾಹುಕಾರ್..!

ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!

- Advertisement -

Latest Posts

Don't Miss