Political News:
ರಾಜ್ಯದಲ್ಲಿ ಇದೀಗ ಮತ್ತೆ ಸಿಡಿ ವಿಚಾರ ಬುಗಿಲೆದ್ದಿದೆ. ಸಾಹುಕಾರ್ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಆಡಿಯೋ ಬಾಂಬ್ ಕೂಡಾ ಸಿಡಿಸಿದ್ದಾರೆ. ಆಡಿಯೋದಲ್ಲಿ ಸಂಪೂರ್ಣವಾಗಿ ಡಿಕೆಶಿ ಜನ್ಮವನ್ನೇ ಜಾಲಾಡಿದಂತಿದೆ. ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದಂತಹ ಆಡಿಯೋದಲ್ಲಿ ಡಿಕೆಶಿ ಮಾತನಾಡಿರುವ ಪ್ರಕಾರವಾಗಿ ದುಬೈ ನಲ್ಲಿ ನನಗೆ ಮನೆ ಇದೆ. ನನ್ನ ಮನೆ ರೈಡ್ ಆದಾಗಲೂ ನಾನು ಭಯ ಪಟ್ಟಿಲ್ಲ 40ರಿಂದ 50 ಕೋಟಿಗೂ ಅಧಿಕವಿದೆ ಸಂಪಾದನೆ. ದೆಹಲಿಯಲ್ಲಿ ಮನೆ ಇದೆ. ಮುಂಬೈನಲ್ಲಿ ಫ್ಲಾಟ್ ಇದೆ. ಎಂಬುವುದಾಗೆಲ್ಲ ಮಾತನಾಡಿರುವುದು ಇದೀಗ ಜಗಜ್ಜಾಹೀರಾಗಿದೆ. ಇದೀಗ ಸಾಹುಕಾರ ಡಿಕೆ ಶಿವಕುಮಾರ್ ಹಾಗು ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಸೇಡು ತೀರಿಸೋದಕ್ಕೆ ಸಿಡಿದೆದ್ದಿದ್ದಾರೆ.
ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ LED TV ಹಂಚೋದ್ರಲ್ಲಿ ಬ್ಯುಸಿ..!
ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!