Saturday, October 25, 2025

Latest Posts

ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಭಿನ್ನಮತ ಸ್ಪೋಟ..?

- Advertisement -

ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಗೌತಮ್ ಗೌಡ ವಿರುದ್ಧ ಮೂಲ ಬಿಜೆಪಿಗರು ಅಸಮಾಧಾನಕ್ಕೆ ಈಡಾಗಿದ್ದಾರೆಂದು ಹೇಳಲಾಗಿದೆ. ರಾಮನಗರದಲ್ಲಿ ಬಿಜೆಪಿಗರ ನಡುವೆ ಭಿನ್ನಮತ ಸ್ಪೋಟವಾಗಿದ್ದು, ಗೌತಮ್ ವಿರುದ್ಧ ಸಭೆ ನಡೆಸಲಾಗಿದೆ. ಇದಕ್ಕೆ ಕಾರಣವೇನಂದ್ರೆ, ರಾಮನಗರದಲ್ಲಿ ಯಾರು ಚುನಾವಣೆಗೆ ನಿಲ್ಲಲಿದ್ದಾರೆಂದು ಇನ್ನೂ ಘೋಷಣೆಯಾಗಿಲ್ಲ. ಆಗಲೇ ಗೌತಮ್, ತಮಗೇ ಟಿಕೆಟ್ ಸಿಗುತ್ತದೆ ಎಂದು, ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆಂದು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ ಬಿಜೆಪಿ ಉಳಿಸಿ. ಬಿಜೆಪಿ ಕಾರ್ಯಕರ್ತರನ್ನು ಬೆಳೆಸಿ ಎಂಬ ಅಭಿಯಾನ ಪ್ರಾರಂಭಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಗೌತಮ್ ವಿರುದ್ಧ ಅಸಮಾಧಾನಕ್ಕೆ ಕಾರಣವೇನೆಂದರೆ, ಗೌತಮ್ ಬಿಜೆಪಿಗೆ ಸೇರಿ ಎರಡೇ ತಿಂಗಳಿಗೆ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಅಲ್ಲದೇ ಇನ್ನು ಹಲವು ಪೋಸ್ಟ್‌ಗಳನ್ನ ನೀಡಲಾಗಿದೆ. ಹಾಗಾಗಿ ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಾರ್ಯಕರ್ತರಿಗೆ ಬೇಸರವಾಗಿದೆ. ಹಾಗಾಗಿ ಬಿಜೆಪಿ ಕಾರ್ಯಕರ್ತರು ಗೌತಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್‌ ವಿರುದ್ಧವೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಅಶ್ವತ್ಥ ನಾರಾಯಣ್, ಗೌತಮ್ ಗೌಡರಿಗೆ ಹಲವು ಕಾರ್ಯಕ್ರಮಗಳ ಉಸ್ತುವಾರಿ ನೀಡಿದ್ದರು. ಆದ್ರೆ ಗೌತಮ್ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಲಿಲ್ಲ. ಅದರಲ್ಲಿ ಹಲವು ಲೋಪಗಳು ಕಂಡುಬಂದಿದ್ದವು. ಹಾಗಾಗಿ ಅಶ್ವತ್ಥ್  ನಾರಾಯಣ್ ವಿರುದ್ಧವೂ ರಾಮನಗರ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗಿವೆ…?

ಇಬ್ಬರ ಜಗಳದ ನಡುವೆ ಕುಸುಮಾ ಹೇಳಿದ್ದೇನು…?

ಹಿರಿಯ ಸಿನಿಮಾ ನಿರ್ದೇಶಕ ಎಸ್.ಕೆ. ಭಗವಾನ್ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

- Advertisement -

Latest Posts

Don't Miss