ಎಲ್ಲ ಧರ್ಮದಲ್ಲೂ ಕೆಲವು ನಿಯಮಗಳಿದೆ. ಅಂಥ ನಿಯಮಗಳನ್ನ ಪಾಲಿಸುವುದರಿಂದ ಧರ್ಮ ಪಾಲನೆಯ ಜೊತೆಗೆ, ಆರೋಗ್ಯ ವೃದ್ಧಿಯೂ ಆಗುತ್ತದೆ. ಹಿಂದೂ ಧರ್ಮದಲ್ಲಿ ಅಂಥ ನಿಯಮಗಳು ಬೇಕಾದಷ್ಟಿವೆ. ಜೈನ ಧರ್ಮದಲ್ಲಿ ಕೂಡ ಅಂಥ ನಿಯಮಗಳಿದೆ. ಹಾಗಾದ್ರೆ ಜೈನ ಧರ್ಮದಲ್ಲಿರುವ ಯಾವ ನಿಯಮ ನಮ್ಮ ಆರೋಗ್ಯ ವೃದ್ಧಿಯಾಗೋಕ್ಕೆ ಸಹಾಯ ಮಾಡತ್ತೆ ಅಂತಾ ತಿಳಿಯೋಣ ಬನ್ನಿ..
ಜೈನ ಧರ್ಮದಲ್ಲಿರುವ ಮೊದಲ ನಿಯಮವೆಂದರೆ, ಬೆಳಿಗ್ಗೆ ಎಲ್ಲಿಯೂ ಉಗುಳಬಾರದು. ಇದರಿಂದ ಕೀಟಗಳು ಸಾಯುತ್ತದೆ. ಇದು ಹಿಂಸಾತ್ಮಕ ಕ್ರಿಯೆಯಾಗಿದೆ. ಇದನ್ನು ಕೇಳಿದ ಓರ್ವ ವೈದ್ಯ, ಒಮ್ಮೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುಳಿದರು. ಅವರು ಉಗುಳಿದ ಜಾಗದಲ್ಲಿದ್ದ ಇರುವೆಗಳು ಸತ್ತು ಹೋದವು. ಆಗಲೇ ಅವರಿಗೆ ಮನುಷ್ಯನ ದೇಹದಲ್ಲಿ ತಯಾರಾಗುವ ಬೆಳಗ್ಗಿನ ಉಗುಳು ಕೀಟಾಣುಗಳಿಗೆ ಎಷ್ಟು ಹಿಂಸಾಕಾರಿಯಾಗಿರುತ್ತದೆ ಎಂದು.
ಆದ್ರೆ ಇದರ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದರೆ, ರಾತ್ರಿಯಿಡೀ ನಮ್ಮ ಬಾಯಿಯಲ್ಲಿ ತಯಾರಾಗುವ ಲಾಲಾರಸ ತುಂಬ ಶಕ್ತಿಯುತವಾಗಿರುತ್ತದೆ. ಅದು ನಮ್ಮ ದೇಹಕ್ಕೆ, ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿರುತ್ತದೆ. ಹಾಗಾಗಿ ಅದನ್ನು ನೆಲಕ್ಕೆ ಉಗುಳದೇ, ನೀರು ಕುಡಿಯುವ ಮೂಲಕ. ಅದನ್ನು ನಾವು ನುಂಗಬೇಕು ಅಂತಾ ಹೇಳಲಾಗಿದೆ.
ಇನ್ನು ಸಂಜೆ 6 ಗಂಟೆ ಬಳಿಕ ಜೈನರು ಊಟ ಮಾಡುವುದಿಲ್ಲ. ಬೆಳಿಗ್ಗೆ ಬೇಗ ಎದ್ದು ತಿಂಡಿ ತಿನ್ನುತ್ತಾರೆ. ಅವರ ಧರ್ಮದ ಪ್ರಕಾರ, ಸಂಜೆ ಬಳಿಕ ಕೀಟಗಳು ಹಾರಾಡುತ್ತದೆ. ಆ ಕೀಟಗಳು ಅವರು ಸೇವಿಸುವ ಆಹಾರದಲ್ಲಿ ಬಿದ್ದು, ಅದನ್ನು ಅವರು ಸೇವಿಸಿದರೆ, ಮಾಂಸಾಹಾರ ಸೇವಿಸಿದ ಪಾಪ ಸುತ್ತಿಕೊಳ್ಳುತ್ತದೆ ಎಂಬ ಕಾರಣಕ್ಕೆ ಸಂಜೆ ಬಳಿಕ ಜೈನರು ಆಹಾರ ಸೇವಿಸುವುದಿಲ್ಲ. ವೈಜ್ಞಾನಿಕ ಸತ್ಯವೆಂದರೆ, ಸಂಜೆ ಬಳಿಕ ಆಹಾರ ಸೇವಿಸದೇ, ಬೆಳಿಗ್ಗೆ ಬೇಗ ಎದ್ದು ಆರೋಗ್ಯಕರ ಆಹಾರ ಸೇವಿಸಿದರೆ, ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?