ಹಾಸನ: ಮತ ಕೇಳಲು ಬಂದ ಅಭ್ಯರ್ಥಿಯನ್ನೇ ಊರಿನಿಂದ ಓಡಿಸಿದ ಗ್ರಾಮಸ್ಥರು

Hassan News:

Feb:24: ಹಾಸನದಲ್ಲಿ ಚುನಾವಣಾ ರಂಗು ಜೋರಾಗಿದ್ದು ಎಲ್ಲಾ ಪಕ್ಷದವರು ಹಾಸನ ಜಿಲ್ಲೆಯ ಕ್ಷೇತ್ರಗಳ ಮೇಲೆ ಹಲವರು ಕಣ್ಣು ಬಿದ್ದಿದೆ. ಹಾಗಾಗಿ ಹಗಲು ರಾತ್ರಿ ಎನ್ನದೆ ಅಭ್ಯರ್ಥಿಗಳು ಮತದಾರರ ಮತ ಸೆಳೆಯಲು ಪರದಾಡುತಿದ್ದಾರೆ. ಹಾಗಅಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎನ್ ಆರ್ . ಸಂತೋಷ್ ಮತ ಕೇಳಲು ರಾತ್ರಿ ಹೊತ್ತು ಬಂದಿರುವ ಸಂದರ್ಭದಲ್ಲಿ ಗ್ರಾಮಸ್ಥರು ಅವರನ್ನು ಊರಿನಿಂದ  ಘೇರಾವ್ ಮಾಡಿದ್ದಾರೆ. ಇನ್ನು ಈ ಘಟನೆಯು ಅರಸೀಕೆರೆ ತಾಲ್ಲೂಕಿನ ಬೇಳಗುಂಬ ಗೊಲ್ಲರ ಹಟ್ಟಿಯಲ್ಲಿ ಗುರುವಾರ ರಾತ್ರಿ ನಡೆದಿದ್ದುಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಅಗಿರುವ ಎನ್.ಆರ್.ಸಂತೋಷ್ ಜನರು ಊರಿನಿಂದ ಓಡಿಸಿದ್ದಾರೆ. ಮತ ಯಾಚನೆಗೆ ಬಂದ ವೇಳೆ ಗ್ರಾಮದ ಸಹಕಾರ ಸಂಘ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಅರೋಪಿಸಿ ಮುಗಿಬಿದ್ದ ಗ್ರಾಮಸ್ಥರು ಎನ್ ಆರ್ ಸಂತೋಷ್ ಮೇಲೆ ಮುಗಿಬಿದ್ದರು
ಇದೇ ವೇಳೆ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿನಡೆದು ಕೆಲಕಾಲ ಗೊಂದಲದ ವಾತಾವರಣ ಗ್ರಾಮದಲ್ಲಿ ಸೃಷ್ಠಿಯಾಯಿತು. ವಿಷಯ ತಿಳಿದ ಗದ್ದಲವನ್ನು ಚಿದ್ರಗೊಳಿಸಲು ಸ್ಥಳಕ್ಕೆ ಆಗಮಿಸದ ಪೋಲಿಸರು ಪರಿಸ್ಥಿತಿ ತಿಳಿಗೊಳಿಸಿದರು.

ಶ್ರೀ ರಾಮ ಸೇನೆ ಸಂಸ್ಥಾಪಕರಿಂದ ಮದ್ಯ ಕಾಯ್ದೆಗೆ ವಿರೋಧ

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ: ಸಿದ್ದರಾಮಯ್ಯ

ಹಣ ತಗೊಂಡು ಟಿಕೆಟ್ ನೀಡದ ಕಂಡಕ್ಟರ್ ಕಟ್ಟಿದ ದಂಡ

About The Author