Bellary Crime News: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ, ವಿವಾಹದ ಕಾರಣಕ್ಕೆ ಓರ್ವ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಳ್ಳಾರಿಯ ಬಟ್ಟಿ ಎಂಬಲ್ಲಿ ನಡೆದಿದೆ.
ನಭಿ ರಸೂಲ್ ಎಂಬಾತ ಭೀಕರವಾಗಿ ಹತ್ಯೆಯಾದ ಯುವಕನಾಗಿದ್ದು, ಈತ 15 ದಿನಗಳ ಹಿಂದೆ ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ, ವಿವಾಹವಾಗಿದ್ದ. ಬಳಿಕ ಮನೆ ಬಿಟ್ಟು ಹೋಗಿದ್ದ. ಅದಾದ ಬಳಿಕ ಮತ್ತೆ ಮನೆಗೆ ಬಂದ ನಭಿಯನ್ನು ಮನೆಯವರು ಬರಮಾಡಿ, ಅದ್ಧೂರಿಯಾಗಿ ಮತ್ತೆ ಮದುವೆ ರಿಸೆಪ್ಶನ್ ಮಾಡಿದ್ದಾರೆ.
ಆದರೆ ಈ ಮದುವೆಗೆ ಹುಡುಗಿ ಕಡೆಯವರ ವಿರೋಧವಿತ್ತು. ಹಾಗಾಗಿ ಆಕೆಯ ಮನೆಯವರು ಈ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ರಿಸೆಪ್ಶನ್ ನಡೆದ ದಿನ ರಾತ್ರಿ 11.30ಕ್ಕೆ ನಭಿ ಗೆಳೆಯ ಕರೆದ ಎಂದು ಎದ್ದು ಹೋಗಿತ್ತು, ರಾತ್ರಿ 2 ಗಂಟೆಯಾದರೂ ಮನೆಗೆ ಬರಲಿಲ್ಲ. ಕಾಲ್ ಮಾಡಿದರೂ ರಿಸೀವ್ ಮಾಡಲಿಲ್ಲ ಎನ್ನಲಾಗಿದೆ.
ಬಳಿಕ ನಭಿ ಪೋಷಕರು ಈ ಬಗ್ಗೆ ಪೋಲೀಸ್ ಸ್ಟೇಶನ್ನಲ್ಲಿ ದೂರು ನೀಡಿದ್ದ, ತನಿಖೆ ನಡೆಸಿದಾಗ, ನಭಿ ರಸೂಲ್ ನನ್ನು ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೋಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಕೌಲ್ ಬಜಾರ್ ಸ್ಟೇಶನ್ನಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆ ಆರೋಪಿ ಯಾರು ಎಂದು ತನಿಖೆ ಬಳಿಕ ತಿಳಿಯಬೇಕಿದೆ.




