ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ“ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕುಡುಗೋಲು, ಮುಚ್ಚು & ಬಡಿಗೆ ತೆಗೆದುಕೊಂಡು ಪರಸ್ಪರ ಮಾರಾಮಾರಿ ನಡೆಸಿದ್ದರು. ಈ ವೇಳೆ ಗಲಾಟೆಯಲ್ಲಿ ಗಾಯಗ`ಂಡಿದ್ದ 56 ವರ್ಷದ ಅಡಿವೇಪ್ಪ ಉದ್ದನಕಾಲು ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಈ ಪ್ರಕರಣದಲ್ಲಿ ಟಿಟಿ ವಾಹನ ಗುದ್ದಿಸಿ, ಹತ್ಯೆಗೆ ಯತ್ನಿಸಿದ್ದರು. ಅವರ ಮನೆ ಮುಂದೆ ಶವವಿರಿಸಿ, ಪ್ರತಿಭಟನೆ ಮಾಡಲಾಗಿದೆ. ಊಟ ಮಾಡಿ ಮನೆಯ ಮುಂದೆ ನಿಂತಿದ್ದ ವ್ಯಕ್ತಿಗೆ ಟಿಟಿ ವಾಹನ ಗುದ್ದಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಏನಿದು ಪ್ರಕರಣ..?

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಬಂಡಿದಾರಿ ವಿವಾದ ಗಂಭೀರ ಸ್ವರೂಪ ಪಡೆದಿತ್ತು. ಸುಮಾರು 15 ರಿಂದ 20 ಮಂದಿ ಭಾಗಿಯಾಗಿದ್ದ ಗುಂಪು ಘರ್ಷಣೆಯಲ್ಲಿ ಬಡಗಿ, ಕುಡುಗೋಲು ಹಾಗೂ ಕಂದಲಿಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ.

ಮಾಲತೇಶ ನಿಂಗಪ್ಪ ಕಾಮೆರ ಅವರ 17 ಎಕರೆ ಜಮೀನಿನಲ್ಲಿರುವ ಸುಮಾರು 20 ಅಡಿ ಅಗಲದ ರಸ್ತೆಯನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪ ಈ ವಿವಾದಕ್ಕೆ ಮೂಲ ಕಾರಣವಾಗಿದೆ. ಅತಿಕ್ರಮಣ ತೆರವುಗೊಳಿಸುವಂತೆ ಉದ್ದನಕಾಲು ಕುಟುಂಬಸ್ಥರು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರವಾಗಿ ಉಭಯ ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಮಾರಾಮಾರಿ ನಡೆದಿದೆ.

ಘರ್ಷಣೆ ವೇಳೆ ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಟಿಟಿ ವಾಹನ ಹಾಯಿಸಿ ಕೊಲೆ ಯತ್ನ ನಡೆಸಿದ ಆರೋಪವೂ ಕೇಳಿಬಂದಿದೆ. ಘಟನೆಯಲ್ಲಿ 7ರಿಂದ 8 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದತ್ತು. ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ವೀರಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅದರಲ್ಲಿ ಓರ್ವ ಸಾವನ್ನಪ್ಪಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘರ್ಷಣೆಗೆ ನಿಖರ ಕಾರಣ ಹಾಗೂ ಟಿಟಿ ವಾಹನ ಹಾಯಿಸಿ ಕೊಲೆ ಯತ್ನ ಆರೋಪ ಸೇರಿದಂತೆ ಎಲ್ಲ ಆಯಾಮಗಳ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

About The Author