ಮಾಲೂರಿನಲ್ಲಿ ಬಿಜೆಪಿ ನಾಯಕರಿಂದ ವಿಜಯ ಸಂಕಲ್ಪ ಯಾತ್ರೆ, ಟಿಕೆಟ್ ಆಕಾಂಕ್ಷಿಗಳ ನಡುವೆ ಪ್ರಬಲ ಪೈಪೋಟಿ

ಕೋಲಾರ :

ಇಂದು ಮಾಲೂರಿನಲ್ಲಿ‌ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ವಿಜಯ ಸಂಕಲ್ಪ‌ ಯಾತ್ರೆ  ನಡೆಸಲಾಯಿತು ಈ ಹಿನ್ನೆಲೆಯಲ್ಲಿ  ಕೋಲಾರ ಜಿಲ್ಲೆಯ  ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ  ಹೂಡಿ ವಿಜಯ್ ಕುಮಾರ್ ಹಾಗೂ ಮಾಜಿ ಶಾಸಕರಿಂದ ಶಕ್ತಿ ಪ್ರದರ್ಶನ ಹಮ್ಮಿಕೊಂಡಿದ್ದರು. ಈ ರೀತಿ ಜನ ಬೇಂಬಲ ಪ್ರದರ್ಶನದಿಂದ ಬಿಜಡಪಿ ನಾಯಕರ  ಮನವೊಲಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಇನ್ನು ಬಿಜೆಪಿ ಯುವ ನಾಯಕರಾದ ಮತ್ತು ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ  ಹೂಡಿ ವಿಜಯ್ ಕುಮಾರ್ ಅವರು ಬಿಜಡಪಿ ನಅಯಕರ ಗಮನ ತನ್ನತ್ತ ಸೆಳೆಯಲಿ ಭರ್ಜರಿಯಾಗಿ ಪ್ಲಾನ್ ಮಾಡಿದ್ದಾರೆ. ಇನ್ನು ಇವರು ಮಾಡಿರುವ ಪ್ಲಾನ್ ಎಂದರೆ ಆಟೋರಿಕ್ಷಗಳಿಗೆ ಕಬ್ಬಿನ ಜಲ್ಲೆ ಕಟ್ಟಿಕೊಂಡು ರೋಡ್ ಶೋ, ಮಾಡಿ  ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಇನ್ನು ಈ ರೋಡ್ ಶೋ ನಲ್ಲಿ ಸುಮಾರು 500 ಹೆಚ್ಚು ಆಟೋಗಳು ರೋಡ್ ಶೋ ನಲ್ಲಿ ಭಾಗಿಯಾಗಿದ್ದವು. ಮಾಲೂರಿನ ಪ್ರಮುಖ ರಸ್ತಗಳಲ್ಲಿ ಹೂಡಿ ವಿಜಯ್ ಕುಮಾರ್ ಪರ ಆಟೋಗಳಿಂದ ರೋಡ್ ಶೋ ಮಾಡಿದರು.

ಹಾಗೂ ಇನ್ನೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಮಾಜಿ ಶಾಸಕ ಮಂಜುನಾಥ್ ಗೌಡರಿಂದ ಬೈಕ್ ಗಳ ರ‌್ಯಾಲಿ ಮಾಡಿಸಿದ್ದರು. ಹಾಗೂ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಮಾಡಿಸಿದ್ದರು. ಇನ್ನು ಮಾಲೂರಿನಲ್ಲಿ ಎರಡು ಬಿಜೆಪಿ ಬಣಗಳಿದ್ದೂ ಇಬ್ಬರೂ ವಿಜಯಸಂಕಲ್ಪ ಯಾತ್ರೆ ಹೆಸರಿನಲ್ಲಿ ತಮ್ಮ ತಮ್ಮ ಶಕ್ತಿ ಪ್ರದರ್ಶನ ಮಾಡಿಕೊಳ್ಳುತಿದ್ದಾರೆ.ಇಬ್ಬರು ಬಿಜಡಪಿಯಲ್ಲಿ ಪ್ರಮುಖ ಆಕಾಂಕ್ಷಿಗಳಾಗಿದ್ದು ಯಾರಿಗೆ  ಟಿಕೆಟ್ ಒಲಿಯಲಿದೆ ಎಂಬುದು ಕಾದುನೊಡಬೇಕಿದೆ.

ಪ್ರಪಂಚದಲ್ಲಿ ಅತಿ ನಿಧಾನವಾಗಿ ಚಲಿಸುವ ರೈಲು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಜ್ವರ; ಆಸ್ಪತ್ರೆಗೆ ದಾಖಲು

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಹಿರಿಯ ನಟಿ ಖುಷ್ಬೂ

 

About The Author