ಮಾಗಡಿ :
ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಿಂದ ಮತದಾರರಿಗೆ ಭಜೃರಿ ಗಿಪ್ಟ್ ನೀಡುತಿದ್ದಾರೆ, ಈಗಾಗಲೆ ಕುಕ್ಕರ್. ಸೀರೆ, ಮಾಂಸದೂಟ ಪ್ರವಾಸದ ಟಿಕೆಟ್ ನೀಡುತ್ತಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ನೀಡುತ್ತಿರುವ ಉಡಿಗೊರೆ ಬಗ್ಗೆ ಕೀಳೀದರೆ ನಿಮಗೆ ಈ ಮೊದಲು ನೀಡಿರುವ ಉಡುಗೊರೆ ತುಂಬಾ ಚಿಕ್ಕದು ಅನ್ನಿಸದಿರದು. ಯಾಕೆಂದರೆ ಅವರು ನೀಡಲು ಹೊರಟಿರುವ ಗಿಫ್ಟ ಬಗ್ಗೆ ಕೇಳಿದರೆ ನಮ್ಮ ಕ್ಕ್ಷೇತ್ರದಲ್ಲೂ ಇಂತಹ ಆಕಾಂಕ್ಷಿ ಇರಬಾರದೆ ಅನ್ನಿಸದಿರದು ಹಾಗಿದ್ರೆ ಯಾವುದು ಆ ಉಡುಗೊರೆ
ಮಾಗಡಿ ಕ್ಷೇತ್ರದ ಮಾಗಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಸಾದ್ ಗೌಡ ಮತದಾರಿಗೆ ದೊಡ್ಡ ಮೊತ್ತದ ಉಡುಗೊರೆನೀಡುವ ಪ್ರಯತ್ನಕ್ಕೆ ಮುಂದಾಗಿದ್ದು, 1 ಸಾವಿರ ಮಹಿಳೆಯರಿಗೆ ಉಚಿತವಾಗಿ 15/20 ಅಳತೆ ಕಾಲಿ ನಿವೇಶನ ನೀಡಲು ಸಿದ್ಧತೆ ನಡೆಸಿದ್ದಾರೆ. ಇನ್ನು ಇವರಿಗೆ ಬಿಡದಿ ಹೋಬಳಿಯಲ್ಲಿ 6 ಎಕರೆ ಜಮೀನಿದ್ದೂ ಆ ಜಾಗದಲ್ಲಿ ಫ್ರೀ ಸೈಟ್ ನೀಡಲು ಪ್ರಸಾದ್ ಗೌಡ ತೀರ್ಮಾನಿಸಿದ್ದಾರೆ.
ಇನ್ನು ನಿವೇಶನ ಹಂಚಿಕೆಯಲ್ಲಿ ಅಂಗವಿಕಲರಿಗೆ ಮತ್ತು ವಿಧವೆಯರಿಗೆ ಮತ್ತು ಅನಾಥರಿಗೆ ಮೊದಲ ಆದ್ಯತೆ ನೀಡಲಾಗಿದ್ದೂ. ಬಿಪಿಎಲ್ ಕಾರ್ಡುದಾರರು ತಮ್ಮ ದಾಖಲೆ ಸಲ್ಲಿಸಿ ಅರ್ಜಿ ಹಾಕಬಹುದು. ಘೋಷಿಸಿದ್ದಾರೆ ಅಲ್ಲದೇ ಮುಂದಿನ ದಿನಗಳಲ್ಲಿ ಮಂಚನಬೆಲೆ ಗ್ರಾಮದ ಬಳಿ ಇರುವ ತಮ್ಮದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಒಟ್ಟು 3 ಸಾವಿರ ಕುಟುಂಬಗಳಿಗೆ ನಿವೇಶನ ಹಂಚುವುದಾಗಿ ಘೋಷಿಸಿದ್ದಾರೆ.