Wednesday, December 25, 2024

Latest Posts

ಕರ್ನಾಟಕ‌ ಒಳ್ಳೆ ದಿಕ್ಕಿನಲ್ಲಿ ನಡೆಯಬೇಕಾದ್ರೆ, ಕಾಂಗ್ರೇಸ್ ನವರ ಗ್ಯಾರೆಂಟಿಗಳು ಅನ್ ಗ್ಯಾರೆಂಟಿ

- Advertisement -

ಕೋಲಾರ: ಕಾಂಗ್ರೆಸ್ ಪಕ್ಷದಿಂದ 4 ನೇ ಗ್ಯಾರೆಂಟಿ ಪ್ರಣಾಳಿಕೆ ಘೋಷಣೆ ಕುರಿತು, ಕೆಜಿಎಫ್ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಮೋಹನ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಸೋಲಿನ ಭಯ ಕಾಡುತ್ತಿದೆ. ಅದರಿಂದ ಏನೇನೋ ಗ್ಯಾರಂಟಿ ರಾಜ್ಯದಲ್ಲಿ‌ ಘೋಷಣೆ ಮಾಡುತ್ತಿದ್ದಾರೆ. ಇಡೀ ರಾಜ್ಯಕ್ಕೆ ಗೊತ್ತು ಇದು ಆಗದೇ ಇರೋ ಕೆಲಸ ಅಂತ ಎಂದು ಮೋಹನ್ ಕೃಷ್ಣ ವ್ಯಂಗ್ಯವಾಡಿದ್ದಾರೆ.

೨.೨೦ ಲಕ್ಷ ಕೋಟಿ ನಮ್ಮ ಬಜೆಟ್ ಮಂಡನೆ ಆಗುತ್ತೆ. ಅದರಲ್ಲಿ ಶೇ ೫೦% ಇವ್ರು ನೀಡಿರುವ ಗ್ಯಾರೆಂಟಿಗಳಿಗೆ ಹೋಗತ್ತೆ. ಕರ್ನಾಟಕ‌ ಒಳ್ಳೆ ದಿಕ್ಕಿನಲ್ಲಿ ನಡೆಯಬೇಕಾದ್ರೆ, ಕಾಂಗ್ರೇಸ್ ನವರ ಗ್ಯಾರೆಂಟಿಗಳು ಅನ್ ಗ್ಯಾರೆಂಟಿ ಆದ್ರೆನೆ ಒಳ್ಳೆಯ ದಿಕ್ಕಿನಲ್ಲಿ‌ ಹೋಗತ್ತೆ. ಇದರ ಬಗ್ಗೆ ಜಾಸ್ತಿ ತಲೆಕೆಸಿಕೊಳ್ಳಬಾರದು ಎಂದು ಮೋಹನ್ ಕೃಷ್ಣ ಹೇಳಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸಂಭಾವನೀಯ ಪಟ್ಟಿ ಹರಿದಾಡುತ್ತಿರುವ ವಿಚಾರ ಕುರಿತು ಮೋಹನ್ ಕೃಷ್ಣ ಮಾತನಾಡಿದ್ದು, ಅಭ್ಯರ್ಥಿ ಅಂತ ಎಲ್ಲೂ ಬಂದಿಲ್ಲ ಇರಬಹುದು ಅಂತ ಬಂದಿದೆ. ಕ್ಷೇತ್ರ ಜನತೆಯನ್ನು ದಿಕ್ಕು ತಪ್ಪಿಸುವ ದಾರಿ ಇದು. ಅದಕ್ಕೆಲ್ಲಾ‌ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿ ಮಾನದಂಡಗಳ ಪ್ರಕಾರ ಬಿ ಫಾರಂ ಹಂಚುತ್ತೆ. ಪಕ್ಷದ ವರಿಷ್ಟರು ಈ ಬಗ್ಗೆ ಭರವಸೇ ನೀಡಿದ್ದಾರೆ ಎಂದಿದ್ದಾರೆ.

ಅಲ್ಲದೇ, ಟಿಕೇಟ್ ನನಗೆ ಸಿಗುತ್ತೆ ಅನ್ನೋ ನಂಬಿಕೆ ನನಗಿದೆ. ಇತ್ತೀಚೆಗೆ ಓಡಾಡುತ್ತಿರುವ ಸುದ್ದಿ ಗಾಳಿ ಸುದ್ದಿ . ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ . ಕ್ಷೇತ್ರದ ಜನ ಇದರ ಬಗ್ಗೆ ಯೋಚಿಸ ಬೇಡಿ . ಕೆಜಿಎಫ್ ಕ್ಷೇತ್ರದಲ್ಲಿ ಮೋಹನ್ ಕೃಷ್ಣಾನೆ ಅಭ್ಯರ್ಥಿಯಾಗೋದು ಶತ ಸಿದ್ದ ಎಂದು ಕೆಜಿಎಫ್ ನಲ್ಲಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಮೋಹನ್ ಕೃಷ್ಣ ಹೇಳಿಕೆ ನೀಡಿದ್ದಾರೆ.

ಉರಿಗೌಡ ಮತ್ತು ನಂಜೇಗೌಡ ಹೆಸರಿನ ನಕಲಿ ಆಧಾರ್ ಕಾರ್ಡ್ ಬಿಡುಗಡೆ…

‘ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚೆ ಮಾಡಿದ್ರೆ ಯಾರ ಹೊಟ್ಟೇನೂ ತುಂಬಲ್ಲ..’

‘ಇನ್ನೊಂದು ಸ್ವಲ್ಪ ಬಿಚ್ಚೋದು ಐತೆ, ಎಳೆಎಳೆಯಾಗಿ ಬಿಚ್ತಿನಿ’

- Advertisement -

Latest Posts

Don't Miss