ಕೋಲಾರ : ಮಾಜಿ ಶಾಸಕ ವರ್ತೂರು ಪ್ರಕಾಶ್ ತನ್ನ ಮಾತಿನಿಂದಲೇ ಕ್ಷೇತ್ರದ ಜನ ಸಹಿಸಲಾರದೆ ಕಡೆಯ ಚುನಾವಣೆಯಲ್ಲಿ ಸೋಲಿಸಿ, ಮೂರನೇ ಸ್ಥಾನ ಹೋಗಿದ್ದು ,ಎಂದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ವರ್ತೂರು ಪ್ರಕಾಶ್ ತಿರುಗೇಟು ನೀಡಿದ್ದಾರೆ.
ಕೋಲಾರ ನಗರದ ಗೌರೀಪೇಟೆಯಲ್ಲಿ ಮನೆ ಮನೆ ಪ್ರಚಾರದ ವೇಳೆ ಮಾತನಾಡಿದ ಅವ್ರು ನೆನ್ನೆ ಕ್ರಾಯಕ್ರಮವೊಂದಲ್ಲಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅವರಿಗೆ ಶೋಭೆ ತರುವಂತದ್ದು ಅಲ್ಲ. ಅವರ ಬಗ್ಗೆ ಹೆಚ್ಚಾಗಿ ಮಾತನಾಡೋದಿಲ್ಲ, ನನ್ನ ಕ್ಷೇತ್ರ ಅಭಿವೃದ್ದಿ ಆಗಬೇಕು. ಕಲುಷಿತ ವಾತವರಣದಿಂದ ಶುದ್ದಿಮಾಡಲು, ನೆಮ್ಮದಿ ಗೌರವದಿಂದ ಸ್ವಾಭಿಮಾನದಿಂದ ಇರಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ವಿನಃ ಇಂತಹ ಟೀಕೆ ಟಿಪ್ಪಣಿಗೆ ಉತ್ತರ ಕೋಡೋದಿಲ್ಲ . ಅದಕ್ಕೆ ಹೆಚ್ಚಾಗಿ ಮನ್ನಣೆ ಸಹ ನೀಡೋದಿಲ್ಲ ಎಂದರು.
ಅವರು ಈ ಹಿಂದೆ ಶಾಸಕರಾಗಿದ್ದಾಗ ಅಭಿವೃದ್ದಿಕಾರ್ಯಗಳನ್ನು ಮಾಡಿದ್ರು .ಮುಂದೆ ಏನು ಮಾಡ್ಬೇಕು ಅಂತ ಅನ್ಕೊಂಡಿದ್ದಾರೆ .ಅವರ ಅಭಿವೃದ್ದಿ ಬಗ್ಗೆ ಚಿಂತನೆ ಏನಾಗಿದೆ ಅನ್ನೋದನ್ನ ಜನ್ರ ಮುಂದೆ ಇಟ್ಟು ಸಾಗಲಿ. ಅನವಶ್ಯಕವಾಗಿ ನನ್ನ ಬಗ್ಗೆ ಇಲ್ಲ ಸಲ್ಲಸಲ್ಲದ ಆರೋಪಗಳನ್ನು ಮಾಡುವುದರಿಂದ ತಮ್ಮ ಹೆಸರನ್ನು ಕೆಡಿಸಿಕೊಳ್ಳುವಂತ ಕೆಲಸ ಮಾಡುತ್ತಿದ್ದಾರೆ ಎಂದು ಕಿವಿ ಮಾತು ಹೇಳಿದರು.
ಕಾಂಗ್ರೇಸ್ ಪಕ್ಷದ ೪ ನೇ ಪ್ರಣಾಳಿಕೆ ಯಿಂದ ಪದವೀದರರು ಹಾಗೂ ಡಿಪ್ಲಮೋ ಮಾಡಿರುವ ಯುವಕ ಯವತಿಯರನ್ನು ಶಾಶ್ವತವಾಗಿ ನಿರೋದ್ಯೋಗಿಗಳನ್ನಾಗಿ ಮಾಡುವು ಯೋಜನೆ. ಇಂತಹ ಯೋಜನೆಗಳನ್ನು ಬಿಟ್ಟು ಯುವ ಜನತೆಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಿ. ಅವರು ನೀಡುವ 3 ಸಾವಿರದಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸ್ವಾವಲಂಬಿ ಜೀವನ ನಡೆಸಲು ಶಾಶ್ವತವಾಗಿ ಅವರಿಗೆ ಉದ್ಯೋಗ ನೀಡಬೇಕು ಶಾಶ್ವತವಾಗಿ ಅರ್ಥಿಕವಾಗಿ ಉಪಯೋಗ ವಾಗುವಂತೆ ಕೆಲಸಗಳನ್ನ ನೀಡಲಿ. ಶಕ್ತಿವಂತ ಯುವಕರ ಯವತಿಯರನ್ನ ಸೋಂಬೇರಿಗಳನ್ನಾಗಿಸುವುದು ಬೇಡ ಎಂದು ಕಾಂಗ್ರೇಸ್ ಪಕ್ಷದ ಪ್ರಣಾಳಿಕೆ ಕುರಿತು ವ್ಯಂಗ್ಯವಾಡಿದ್ದಾರೆ.
ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?