Friday, December 13, 2024

Latest Posts

ಆರೋಗ್ಯ ಸಮಸ್ಯೆಯ ಕಾರಣಕ್ಕೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಹೊರಟ ಶಿವಣ್ಣ

- Advertisement -

Sandalwood News: ಸೆಂಚೂರಿ ಸ್ಟಾರ್ ಶಿವಣ್ಣ ಅವರಿಗೆ ಅನಾರೋಗ್ಯವಾಗಿದ್ದು, ಅವರು ಚಿಕಿತ್ಸೆಗಾಗಿ 1 ತಿಂಗಳು ಅಮೆರಿಕಕ್ಕೆ ಹೋಗಲಿದ್ದಾರೆ. 60 ವರ್ಷ ವಯಸ್ಸು ದಾಟಿದ್ರು, ಶಿವಣ್ಣ ಇನ್ನನುವರೆಗೂ ಫಿಟ್ ಆಗಿದ್ದಾರೆ. ಅವರನ್ನು ನೋಡಿದ್ರೆ, ಅವರಿಗೂ ಅನಾರೋಗ್ಯ ಸಮಸ್ಯೆ ಇದೆ ಅನ್ನೋದು ಗೊತ್ತೇ ಆಗೋದಿಲ್ಲ.

ಆದರೆ ಅವರೇ ಯೂಟ್ಯೂಬ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ನನಗೆ ಅನಾರೋಗ್ಯವಿರೋದು ನಿಜ. ನಾನು ಕೂಡ ಮನುಷ್ಯನೇ, ನನನಗೂ ಅನಾರೋಗ್ಯ ಸಮಸ್ಯೆ ಇದೆ. ನಾನು ಸುಳ್ಳು ಹೇಳೋದಿಲ್ಲ. ಇದಕ್ಕಾಗಿ ನಾನು ಚಿಕಿತ್ಸೆ ಪಡೆಯಬೇಕಿದೆ. ಚಿಕಿತ್ಸೆಯಲ್ಲಿ 4 ಸೆಷನ್ ಇದ್ದು, ಈಗಾಗಲೇ 2 ಸೆಷನ್ ಇದೆ. ಅದರಲ್ಲಿ ನಾನು ಶಸ್ತ್ರ ಚಿಕಿತ್ಸೆ ಪಡೆಯಬೇಕಾಗಿದೆ. ಆ ಚಿಕಿತ್ಸೆ ಭಾರತದಲ್ಲೇ ತೆಗೆದುಕೊಳ್ಳಬೇಕೋ, ವಿದೇಶದಲ್ಲಿ ತೆಗೆದುಕೊಳ್ಳಬೇಕೋ ಎಂದು ಇನ್ನು ನಿರ್ಧರಿಸಬೇಕಿದೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವುದಾದರೆ, ನಾನು 1 ತಿಂಗಳು ಅಲ್ಲೇ ಇರಬೇಕಾಗುತ್ತದೆ ಎಂದಿದ್ದಾರೆ.

ಇನ್ನು ಶಿವಣ್ಣ ಬೇಗ ಆರೋಗ್ಯವಾಗಿ ಬರಲಿ, ಮತ್ತೆ ಸಿನಿಮಾ ಮಾಡಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ಶಿವರಾಜ್‌ಕುಮಾರ್‌ ಆಗಾಗ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಈ ಪ್ರಶ್ನೆ ಹುಟ್ಟಿಕೊಂಡಿದ್ದು, ಇದೀಗ ಸ್ವತಃ ಶಿವಣ್ಣನೇ ಈ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

- Advertisement -

Latest Posts

Don't Miss