Wednesday, March 12, 2025

Latest Posts

‘ದ್ವೇಷ ಮಾಡೋದು ಕುಮಾರಸ್ವಾಮಿ ಒಬ್ಬರೇ’

- Advertisement -

ಮಂಡ್ಯ: ಮದ್ದೂರಿನ ಕರಡಹಳ್ಳಿಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಮಾಜಿ ಸಿಎಂ ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘’ಮಂಡ್ಯ ಜಿಲ್ಲೆಯಲ್ಲಿ ಯಾರೊಬ್ಬರಿಗೂ ಸಹ ದ್ವೇಷ ಮಾಡುವ ಅಭ್ಯಾಸ ಇಲ್ಲ. ಕುಮಾರಸ್ವಾಮಿಗೆ ಮಾತ್ರ ಸೀಮಿತ, ದ್ವೇಷ, ಪ್ರತಿಕೂಲ ತೀರಿಸಿಕೊಳ್ಳೊದು. ದೇವರು ಅವರಿಗೆ ಒಳ್ಳೆಯದು ಮಾಡಲಿ. ಒಂದುವರೆ ವರ್ಷ ಸಿಎಂ ಆಗಿದ್ರು. ಮಂಡ್ಯ ಜಿಲ್ಲೆಯ 7 ಜನರನ್ನ ಗೆಲ್ಲಿಸಿಕೊಟ್ರು. ಅದರ ಪ್ರತಿಕೂಲವಾಗಿ ಉತ್ತರ ಕೊಟ್ಟಿದ್ದಾರೆ. ನಾವು ಯಾರು ದ್ವೇಷ ಮಾಡಲ್ಲ, ನಮ್ಮ ಮೇಲೆ ದ್ವೇಷ ಮಾಡ್ತಿದ್ದಾರೆ. ಇದು ಮಂಡ್ಯ ಜಿಲ್ಲೆಯ ಜನಕ್ಕೆ ಗೊತ್ತಿದೆ. ನಾವು ದ್ವೇಷ ಮಾಡಲ್ಲ, ಕುಮಾರಸ್ವಾಮಿ ದ್ವೇಷ ಮಾಡ್ಲಿ. ಒಳ್ಳೆಯದಾಗಲಿ’’ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್-ಬಿಜೆಪಿ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಚೆಲುವರಾಯಸ್ವಾಮಿ, ‘’ಕಾಂಗ್ರೆಸ್ ಬಿಜೆಪಿ ಹೊಂದಾಣಿಕೆ ಬಗ್ಗೆ ಇವರ ಮನೆಯಲ್ಲಿ ಕೆಲಸ ಮಾಡುವವರು ಸಹ ನಂಬಲ್ಲ. ಸಾಮಾನ್ಯ ಜನರು ದಡ್ಡರಲ್ಲ.ಬಿಜೆಪಿ-ಕಾಂಗ್ರೇಸ್ ಹೊಂದಾಣಿಕೆ ಇತಿಹಾಸದಲ್ಲೆ ಸಾಧ್ಯವಿಲ್ಲ. ಜೆಡಿಎಸ್ ಈ ವರೆಗೆ ಬಿಜೆಪಿ ಜೊತೆ ಕಾಂಗ್ರೆಸ್ ಜೊತೆ ಒಂದಾಗಿದ್ದಾರೆ’’ ಎಂದು ಹೇಳಿದ್ದಾರೆ‌.

ಅಲ್ಲದೇ, ‘’ಒಬ್ಬ ಮಾಜಿ ಸಿಎಂ ತೂಕವಾಗಿ ಮಾತನಾಡಬೇಕು. ಬಿಜೆಪಿ ಕಾಂಗ್ರೆಸ್ ಒಂದಾಗಲು ಸಾಧ್ಯವಿಲ್ಲ. ಸಿಟಿ ರವಿ, ಸೋಮಣ್ಣ ನನ್ನ ಫ್ರೆಂಡ್ಸ್. ಅಶೋಕ್, ಸಾರಾ ಮಹೇಶ್, ಪುಟ್ಟರಾಜು ಕೂಡ ಫ್ರೆಂಡ್ಸ್. ರಾಜಕಾರಣ ರಾಜಕಾರಣ. ವೈಯಕ್ತಿಕವಾಗಿ ನಾವು ಯಾರನ್ನು ದ್ವೇಷ ಮಾಡಲ್ಲ. ಫ್ರೆಂಡ್ಶಿಪ್ ಬೇರೆ, ರಾಜಕರಣ ಬೇರೆ. ಕುಮಾರಸ್ವಾಮಿ ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ. ಮಂಡ್ಯ ಜನಕ್ಕೆ ಗೊತ್ತಿದೆ ಅವರೇ ತಿರ್ಮಾನ ಮಾಡ್ತಾರೆ’’ ಎಂದು ಹೇಳಿದ್ದಾರೆ.

ಬಿಜೆಪಿ ಸೇರಿದ ಬಳಿಕ ಮೊದಲ ಸುದ್ದಿಗೋಷ್ಠಿ-ಎ.ಟಿ ರಾಮಸ್ವಾಮಿ

ಕಿಚ್ಚನ ಬಿಜೆಪಿ ಸೇರ್ಪಡೆ ವಿಚಾರಕ್ಕೆ ನಟ ಪ್ರಕಾಶ್ ರಾಜ್ ಟ್ವೀಟ್

ತಮ್ಮನ ಅಕ್ರಮ ಸಂಬಂಧಕ್ಕೆ ಅಣ್ಣನ ಸಜೀವದಹನ

- Advertisement -

Latest Posts

Don't Miss