Saturday, July 5, 2025

Latest Posts

ಚುನಾವಣೆ ನಿಮಿತ್ತ ಪಟ್ಟಣದಲ್ಲಿ ಭದ್ರತಾ ಪಡೆಯಿಂದ ಪಥ ಸಂಚಲನ

- Advertisement -

ಸಕಲೇಶಪುರ : ಮೇ 10ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿದೆ. ವ್ಯವಸ್ಥಿತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗವು ಬಿಗಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು, ಪೊಲೀಸರು, ಹೋಂ ಗಾರ್ಡ್‌ಗಳನ್ನು ಬಳಸಿಕೊಳ್ಳಲು ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯ ಭದ್ರತೆಗಾಗಿ ಬಂದಿರುವ ಸಿಬ್ಬಂದಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಗುರುವಾರ ಪಥ ಸಂಚಲನ ನಡೆಸಿದರು.

ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ತೊಡಗಿದ್ದರೆ. ಪ್ರಜಾತಂತ್ರದ ಹಬ್ಬವನ್ನು ಸುಗಮ, ಶಾಂತಿಯುತವಾಗಿ ನಡೆಸಲು ಚುನಾವಣಾ ಆಯೋಗವು ಸಹ ಸಿದ್ದತೆ ಮಾಡಿಕೊಂಡಿದೆ. ಚುನಾವಣೆಯಲ್ಲಿ ಭದ್ರತೆಗಾಗಿ ಪ್ಯಾರಾ ಮಿಲಿಟರಿ ತುಕಡಿಗಳು ಅಣೆಯಾಗಿವೆ.

ಈ ವೇಳೆ ಮಾತನಾಡಿದ ಸಹಾಯಕ ಪೋಲಿಸ್ ಅದೀಕ್ಷಕ ಎಚ್.ಎನ್ ಮಿಥುನ್,ತಲಾ 48  ಜನರನ್ನು ಹೊಂದಿರುವ ಮೂರು ಪ್ಯಾರಾ ಮಿಲಿಟರಿ ಪಡೆಗಳು ಈಗಾಗಲೇ ಪಟ್ಟಣಕ್ಕೆ ಬಂದಿವೆ. ಇದೇ ತಂಡದೊಂದಿಗೆ ಕೆಎಸ್‌ಆರ್‌ಪಿ, ಡಿಆರ್, ಸಿವಿಲ್ ಪೊಲೀಸರು ಸಹ  ನಗರದಲ್ಲಿ ಪಥ ಸಂಚಲನ ಮಾಡಿದರು. 220ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಸಶಸ್ತ್ರಗಳೊಂದಿಗೆ ತಾಲೂಕಿನ ಪ್ರಮುಖ ಭಾಗಗಳಲ್ಲಿ ಸಂಚರಿಸಲಿದ್ದಾರೆ. ಮತದಾರರು ನಿರ್ಭಿತಿಯಿಂದ ಮತದಾನ ಮಾಡಲು ಬೇಕಾದ ಸಕಲ ವ್ಯವಸ್ಥೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಸನ್ನದವಾಗಿದೆ ಬಾಳ್ಳುಪೇಟೆ,ಬೆಳಗೋಡು,ಹಾನುಬಾಳು,ಹೆತ್ತೂರು,ಹಲಸುಲಿಗೆ ಸೇರಿದಂತೆ ಇನ್ನಿತರ  ಪ್ರಮುಖ ಊರುಗಳಲ್ಲಿ ಪಥ ಸಂಚಲನ ನಡೆಯಲಿದೆ ಎಂದು ತಿಳಿಸಿದರು.

ಗ್ರಾಮಾಂತರ ಪೊಲೀಸ್ ಠಾಣೆಯಿಂದ   ಆರಂಭವಾದ ಪಥ ಸಂಚಲನವು ಚಂಪಕನಗರ ವೃತ್ತ, ಹೊಸ ಬಸ್ ನಿಲ್ದಾಣ , ಅಜಾದ್ ರಸ್ತೆ , ಅಶೋಕ್ ರಸ್ತೆ ಮೂಲಕ ಕುಶಾಲನಗರದವರೆಗೂ ನಡೆಯಿತು‌.

ಬಿ. ಎಂ ರಸ್ತೆಯ ಹಳೆ ಬಸ್ ನಿಲ್ದಾಣ ಸಮೀಪ ರಸ್ತೆಯಲ್ಲಿ ಜನರು ಹೂವುಗಳನ್ನು ಭದ್ರತ ಸಿಬ್ಬಂದಿಗಳ ಮೇಲೆ ಎಸೆದು ಸ್ವಾಗತಿಸಿದರು. ಕೆಲವರು ಅವರಿಗೆ ಗೌರವ ಪೂರ್ವಕವಾಗಿ ಕೈ ಮುಗಿದರೆ, ಮಕ್ಕಳು ಕೈಕುಲುಕಿ ಸ್ವಾಗತಿಸಿದರು. ಪಥ ಸಂಚಲನದಲ್ಲಿ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್,ಸಹಾಯಕ ಪೊಲೀಸ್ ಅಧೀಕ್ಷಕ ಎಚ್. ಎನ್ ಮಿಥುನ್, ವೃತ್ತ ನಿರೀಕ್ಷಕರುಗಳಾದ ಚೈತನ್ಯ, ಪಿ. ಕೆ ರಾಜು, ಪಿಎಸ್ಐ ಗಳಾದ ಬಸವರಾಜ್, ನವೀನ್, ಖತೀಜಾ,ಸುನೀಲ್ ಇದ್ದರು.

‘ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ’

‘ಹಳೇ ರೈಲಿಗೆ ಹೊಸ ಇಂಜಿನ್ ಅಳವಡಿಸಿ ಬಾವುಟ ಹಾರಿಸಲು ಮೋದಿಯೇ ಬೇಕೆ..?’

ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ ಸೇರ್ಪಡೆ.

- Advertisement -

Latest Posts

Don't Miss