Wednesday, September 11, 2024

Latest Posts

ಪೂರಿ, ಚಪಾತಿಗೆ ಮ್ಯಾಚ್ ಆಗುವ ಬಟಾಣಿ ಕರಿ ರೆಸಿಪಿ

- Advertisement -

ನೀವು ಪೂರಿ ಅಥವಾ ಚಪಾತಿ ಜೊತೆ ತಿನ್ನೋಕ್ಕೆ ಹಲವಾರು ರೀತಿಯ ಸಾಗು, ಕರಿ ತಯಾರಿಸಿರ್ತೀರಿ. ಆದ್ರೆ ಆ ಟೇಸ್ಟ್‌ಗಳು ಬೇರೆ ಬೇರೆ ರೀತಿ ಬರುತ್ತೆ. ಆದ್ರೆ ನಾವಿಂದು ಸ್ಪೆಶಲ್ ಬಟಾಣಿ ಕರಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಬಟಾಣಿ ಅಥವಾ ಹಸಿ ಬಟಾಣಿ, ಮೂರು ಬೇಯಿಸಿ ಸಿಪ್ಪೆ ತೆಗೆದು ಕಟ್ ಮಾಡಿದ ಬಟಾಟೆ,  ಎರಡು ಈರುಳ್ಳಿ, 5 ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಶುಂಠಿ, ಹಸಿಮೆಣಸಿನಕಾಯಿ, ಕೊಂಚ ಜೀರಿಗೆ, ಕೊತ್ತಂಬರಿ ಸೊಪ್ಪು, ಕಸೂರಿ ಮೇಥಿ, ಮೂರು ಸ್ಪೂನ್ ಎಣ್ಣೆ, ಕೊಂಚ ಇಂಗು, ಒಂದು ಕಪ್ ಟೊಮೆಟೋ ಪ್ಯೂರಿ, ಅವಶ್ಯಕತೆ ಇದ್ದಷ್ಟು ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಕೊಂಚ ಸಕ್ಕರೆ, ಎರಡು ಸ್ಪೂನ್ ಕ್ರೀಮ್, ಅಗತ್ಯಕ್ಕೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನ ಗ್ರೈಂಡ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಜೀರಿಗೆ ಹಾಕಿ ಹುರಿಯಿರಿ. ನಂತರ ಇಂಗು, ಟೊಮೆಟೋ ಪ್ಯೂರಿ, ಹಾಕಿ ಕೊಂಚ ಕುದಿಸಿ. ನಂತರ ಖಾರದ ಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಸಕ್ಕರೆ, ನೀರು, ಕ್ರೀಮ್ ಹಾಕಿ ಮತ್ತೆ ಕುದಿಸಿ. ಈಗ ಬಟಾಣಿ, ಬಟಾಟೆ ಮಿಕ್ಸ್ ಮಾಡಿ ಕೊಂಚ ಹೊತ್ತು ಬೇಯಿಸಿ. ಇದಾದ ಬಳಿಕ ಕಸೂರಿ ಮೇಥಿ ಮತ್ತು ಕೊತ್ತೊಂಬರಿ ಸೊಪ್ಪು ಹಾಕಿ ಕೊಂಚ ಹೊತ್ತು ಬೇಯಿಸಿದ್ರೆ ಮಟರ್ ಗ್ರೇವಿ ರೆಡಿ.

ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ 5 ಅತ್ಯುತ್ತಮ ಲಾಭಗಳಿವು..

ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆದಾ..? ಕೆಟ್ಟದ್ದಾ..?

1 ವಾರ ಚೀಯಾ ಸೀಡ್ಸ್ ತಿಂದ್ರೆ ನಿಮ್ಮ ಆರೋಗ್ಯದಲ್ಲಿ ಈ ಬದಲಾವಣೆಯಾಗತ್ತೆ ನೋಡಿ..

- Advertisement -

Latest Posts

Don't Miss