Tuesday, April 15, 2025

Latest Posts

“ಜಯವಾಹಿನಿಗೆ ಎಲ್ಲೆಡೆ ದೊರೆಯುತ್ತಿದೆ, ಅಭೂತಪೂರ್ವ ಜನ ಸ್ಪಂದನೆ”

- Advertisement -

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ, ಹರಿಹರ ಮತ್ತು ರಾಣೆಬೆನ್ನೂರಿನಲ್ಲಿ ಬಿಜೆಪಿ ಪ್ರಚಾರ ಭರ್ಜರಿಯಾಗಿ ಸಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅಮಿತ್ ಶಾ, ಬಿಜೆಪಿ ನಾಯಕರೆಲ್ಲ ಇಂದು ಜಯವಾಹಿನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸಹಸ್ರಾರು ಸಂಖ್ಯೆಯಲ್ಲಿ ನೆಲೆಸಿದ್ದ ಜನರು ಈ ಕಾರ್ಯಕ್ರಮಕ್ಕೆ ಸ್ಪಂದಿಸಿದ್ದಾರೆ.

ಈ ಬಗ್ಗೆ ಬಸವರಾಜ ಬೊಮ್ಮಾಯಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ನಮ್ಮ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಹಾಗೂ ದೂರದೃಷ್ಟಿ ಯೋಜನೆಗಳು ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದೆ ಎಂಬುದಕ್ಕೆ ನೆರೆದಿರುವ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ.

“ಜಯವಾಹಿನಿಗೆ ಎಲ್ಲೆಡೆ ದೊರೆಯುತ್ತಿದೆ, ಅಭೂತಪೂರ್ವ ಜನ ಸ್ಪಂದನೆ” ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ರಿಪೋರ್ಟ್ ಕಾರ್ಡ್ ಅನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ನಮ್ಮ “ಜಯವಾಹಿನಿ” ಯಾತ್ರೆ ಇಂದು ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರ ಹಾಗೂ ರಾಣೆಬೆನ್ನೂರನ್ನು ತಲುಪಿದ್ದು,

ಹರಿಹರ ಮತ್ತು ರಾಣೆಬೆನ್ನೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಡಾ||ಬಿ.ಪಿ.ಹರೀಶ್ ಮತ್ತು ಶ್ರೀ ಅರುಣ್ ಕುಮಾರ್ ಪೂಜಾರ್ ರವರ ಪರ ಬಿರುಸಿನ ಚುನಾವಣಾ ಪ್ರಚಾರ ನಡೆಸಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ನೆರೆದಿದ್ದ ಅಪಾರ ಜನಸ್ತೋಮಕ್ಕೆ ವಿನಂತಿಸಿದೆನು ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ಈ ಚುನಾವಣೆ ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಗೌರವ ಉಳಿಸುವ ಚುನಾವಣೆ’

‘ನಾನು ಇಂಜಿನಿಯರ್ ಆಗಬೇಕು ಎಂಬುದು ನನ್ನ ಅಪ್ಪನ ಕನಸಾಗಿತ್ತು, ಆದರೆ… ‘

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಖೆಡ್ಡಾ ತೋಡಿದ ನಡ್ಡಾ

- Advertisement -

Latest Posts

Don't Miss