ಮಂಡ್ಯ: ಇನ್ನು ಕೆಲವೇ ಕ್ಷಣಗಳಲ್ಲಿ ಯೋಗಿ ಮಂಡ್ಯಕ್ಕೆ ಬರಲಿದ್ದು, ಯೋಗಿ ಸ್ವಾಗತಕ್ಕೆ ಸಕ್ಕರೆನಾಡು ಭರ್ಜರಿಯಾಗಿ ಸಿದ್ದವಾಗಿದೆ. ಸಂಜಯ ವೃತ್ತದಿಂದ ರೋಡ್ ಶೋ ಆರಂಭವಾಗಲಿದ್ದು, .ಮಹಾವೀರ ವೃತ್ತದವರೆಗೂ ಸುಮಾರು 800 ಮೀ ರೋಡ್ ಶೋ ನಡೆಸಲಿದ್ದಾರೆ.
ಇನ್ನೊಂದು ವಿಶೇಷತೆ ಅಂದ್ರೆ, ಯೋಗಿ ಬರ್ತಿದ್ದಂತೆ ವೇದ ಘೋಷ ಪಠನೆಗೆ ಸಿದ್ದತೆ ನಡೆಸಲಾಗಿದೆ. ಯೋಗಿಗಾಗಿ ಮಂಗಳವಾದ್ಯ, ಪೂರ್ಣಕುಂಭ ಸ್ವಾಗತ ನೀಡಲು ಕೇಸರಿ ಪಡೆ ಸಜ್ಜಾಗಿದೆ.
ಪೂಜಾಕುಣಿತ, ನಂದಿ ಕುಣಿತ, ವೀರಗಾಸೆ, ಕಹಳೆ ಸೇರಿದಂತೆ ಹತ್ತಾರು ಕಲಾತಂಡಗಳು ಸಂಜಯ್ ವೃತ್ತದ ಬಳಿ ಸ್ವಾಗತಕ್ಕಾಗಿ ತಯಾರಾಗಿದ್ದು, ಯೋಗಿಯನ್ನು ನೋಡಿ, ಜನಸಂದಣಿ ನೆರೆದಿದೆ. ಹಾಗಾಗಿ ರಸ್ತೆಯ ಎರಡು ಬದಿಗಳಲ್ಲೂ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
‘ಶಾಸಕರಿಗೂ ವಯಸ್ಸಾಗಿದ್ದು ವಿಶ್ರಾಂತಿಯ ಅಗತ್ಯವಿದೆ, ಹಾಗಾಗಿ ಬಿಜೆಪಿಗೆ ಓಟ್ ಹಾಕಿ’
ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಾ ಕ್ಯಾಂಪೇನ್ ಮಾಡಿದ ಮೋಹನ್ ಬಾಬು..




